ಅಧ್ಯಕ್ಷತೆ ಕೊಡದ ಅಸಮಾಧಾನ : ಸಿ.ಎ. ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎನ್.ಎ. ರಾಜೀನಾಮೆ

0

ಹಿರಿಯನಾದ ತನಗೆ ಸಿ.ಎ. ಬ್ಯಾಂಕ್ ಅಧ್ಯಕ್ಷತೆ ನಿರಾಕರಿಸಿದ ಪಕ್ಷದ ನಿಲುವಿಗೆ ಅಸಮಾಧಾನಗೊಂಡು ಬಿಜೆಪಿಯ ಹಿರಿಯ ನಾಯಕ ಎನ್.ಎ.ರಾಮಚಂದ್ರರು ಸಿ.ಎ. ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿದು ಬಂದಿದೆ. ಎನ್,ಎ,ರಾಮಚಂದ್ರರು ಹಿಂದೆ ಕೆಲವು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿ, ಒಂದು ಬಾರಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈ ಬಾರಿ ಅಧ್ಯಕ್ಷತೆ ತನಗೇ ದೊರೆಯುವುದೆಂಬ ವಿಶ್ವಾಸದಲ್ಲಿದ್ದರು.

ಆದರೆ ಪಕ್ಷ ಸಿ.ಎ. ಬ್ಯಾಂಕ್ ಅಧ್ಯಕ್ಷತೆಯನ್ನು ಪ್ರಥಮ ಬಾರಿ ಆಯ್ಕೆಯಾದ ವಿಕ್ರಂ ಅಡ್ಪಂಗಾಯರಿಗೆ ನೀಡುವ ನಿರ್ಧಾರ ಕೈಗೊಂಡಿತು. ತನ್ನನ್ನು ಕಡೆಗಣಿಸಿದರೆಂಬ ಭಾವನೆ ಬಂದ ಹಿನ್ನಲೆಯಲ್ಲಿ ಎನ್.ಎ.ರಾಮಚಂದ್ರರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆಂದು ತಿಳಿದು ಬಂದಿದೆ.