ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಅರಂತೋಡು ಗ್ರಾಮ ಪಂಚಾಯತ್‌ಯ ಸಹಯೋಗದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸುಳ್ಯ ತಾಲೂಕಿನ ಪ್ರಥಮ ಕೂಸಿನ ಮನೆ ಅರಂತೋಡು ಪ್ರಾಥಮಿಕ ಅರೋಗ್ಯ ಕೇಂದ್ರದ ಬಳಿ ಜ.11 ರಂದು ಉದ್ಘಾಟನೆಗೊಂಡಿತು.
ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅರಂತೋಡು ಪಂಚಾಯತ್‌ನ ಅಧ್ಯಕ್ಷ ಕೇಶವ ಆಡ್ತಲೆಯವರು ಅರಂತೋಡಿನಲ್ಲಿ ಪ್ರಥಮವಾಗಿ ಆರಂಭ ಮಾಡಲು ಅವಕಾಶ ಮಾಡಿಕೊಟ್ಟ ತಾಲೂಕು ಪಂಚಾಯತ್ ಅಧಿಕಾರಿ ವರ್ಗದವರಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನೂರು, ಪಂಚಾಯತ್ ಸದಸ್ಯರಾದ ಶ್ರೀಮತಿ ಮಾಲಿನಿ ವಿನೋದ್ ಉಳುವಾರು, ಕು.ಶ್ವೇತಾ ಅರಮನೆಗಾಯ, ಉದ್ಯೋಗ ಖಾತ್ರಿ ಯೋಜನೆ ಇಂಜಿನಿಯರ್ ಶ್ರೀಮತಿ ರಶ್ಮಿ, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಅಶ್ರಫ್ ಗುಂಡಿ, ತೆಂಕಿಲ್ ಹೆಚ್‌ಪಿ ಗ್ಯಾಸ್‌ನ ಮ್ಯಾನೇಜರ್ ಧನರಾಜ್ ಕಾಡುಪಂಜ ಹಾಗೂ ಪಂಚಾಯತ್ ಸಿಬ್ಬಂದಿಗಳು ಸ್ವಚ್ಛತಾ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಸ್ವಾಗತಿಸಿ, ವಂದಿಸಿದರು.