ಕೊಲ್ಲಮೊಗ್ರ : ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ

0

ಹೈನುಗಾರಿಕೆ ವಿಚಾರಗೋಷ್ಠಿ ಪರಿಕರಗಳ ಪ್ರಾತ್ಯಕ್ಷಿಕೆ ಮತ್ತು ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ

ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ತಾಲೂಕು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು, ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹರಿಹರ ಪಲ್ಲತ್ತಡ್ಕ, ಕಲ್ಮಕಾರು,ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ, ಕಟ್ಟಗೋವಿಂದನಗರ, ಬಾಳುಗೋಡು,ಐನೆಕಿದು,ನಡುಗಲ್ಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ಹೈನುಗಾರಿಕೆ ವಿಚಾರಗೋಷ್ಠಿ ಪರಿಕರಗಳ ಪ್ರಾತ್ಯಕ್ಷಿಕೆ ಮತ್ತು ಜಾನುವಾರುಗಳ ಆರೋಗ್ಯ ತಪಾಸನಾ ಶಿಬಿರ ಜ.೧೨ರಂದು ಮಯೂರಕಲಾ ಮಂದಿರ ಕೊಲ್ಲಮೊಗ್ರದಲ್ಲಿ ನಡೆಯಿತು.

ಆರಂಭದಲ್ಲಿ ಗೋಪೂಜೆ ನೆರವೇರಿಸಿ, ಕರುಗಳ ಪ್ರದರ್ಶನದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಂಗಳೂರು ಇದರ ನಿರ್ದೇಶಕ ನಾರಾಯಣ ಪ್ರಕಾಶ್ ನರೆವೇರಿಸಿದರು. ಕಾರ್ಯಕ್ರಮವನ್ನು ದ.ಕ ಹಾಲು ಒಕ್ಕೂಟ ಮಂಗಳೂರು ಇದರ ಉಪಾಧ್ಯಕ್ಷರಾದ ಎಸ್ ಬಿ ಜಯರಾಮ್ ರೈ ಬಳ್ಳಜ ದೀಪ ಬೆಳಗಿ ಉದ್ಘಾಟಿಸಿದರು. ತಾಲೂಕು ಮುಖ್ಯ ಪಶು ವೈದ್ಯಾದಿಕಾರಿ ನಿತಿನ್ ಪ್ರಭು ಶಿಬಿರದಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಲಮೊಗ್ರ ಗ್ರಾ.ಪಂ ಅದ್ಯಕ್ಷೆ ಜಯಶ್ರೀ ಚಾಂತಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್,ಕೊ.ಹ.ಪ್ರಾ ಕೃ ಪ ಸಂ ಅಧ್ಯಕ್ಷ ಹರ್ಷಕುಮಾರ್ ದೇವಜನ, ದ.ಕ ಹಾಲು ಒಕ್ಕೂಟ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್, ತಾಲೂಕು ಮುಖ್ಯ ಪಶು ವೈದ್ಯಾದಿಕಾರಿ ನಿತಿನ್ ಪ್ರಭು, ಗುತ್ತಿಗಾರಿನ
ಡಾ ವೆಂಕಟಾಚಲಪತಿ, ಗಣೇಶ್ ಭಟ್, ಪುಪ್ಪರಾಜ್ ಪಡ್ಪು, ಶ್ರೀಮತಿ ಪ್ರೇಮಭಟ್, ಕರುಣಾಕರ ಬಿಳಿಮಲೆ, ಶ್ರೀಮತಿ ಶರ್ಮಿಳಾ ಕೆ,ಕಿಶೋರ್ ಕುಮಾರ್ ಕೂಜುಗೋಡು, ರೋಹಿತಾಕ್ಷ ಉತ್ರಂಬೆ ವೇದಿಕೆಯಲ್ಲಿದ್ದರು.


ಪಾರ್ವತಿ ಪ್ರಾರ್ಥಿಸಿ, ಬೆಳ್ಳಾರೆ ಪಶು ವೈದ್ಯಾದಿಕಾರಿ ಸೂರ್ಯನಾರಾಯಣ ಸ್ವಾಗತಿಸಿದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು.
ಜಾನುವಾರುಗಳಲ್ಲಿ ಬಂಜೆತನ ಸಮಸ್ಯೆ ಹಾಗು ಹೆಣ್ಣು ಕರುಗಳ ಸಾಕಾಣಿಕೆ ಬಗ್ಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಂಗಳೂರು ಇದರ ಉಪವ್ಯವಸ್ಥಾಪಕ ಡಾ ಚಂದ್ರಶೇಖರ ಭಟ್ ಮಾಹಿತಿ ನೀಡಿದರು. ಹಸಿರು ಮೇವು ಮತ್ತು ಪಶುಆಹಾರ ಬಳಕೆ ಬಗ್ಗೆ ದ ಕ ಹಾಲು ಒಕ್ಕೂಟ ವಿಸ್ತರಣಾದಿಕಾರಿ ನಿರಂಜನ್ ಬಿ.ಎನ್ ಮಾಹಿತಿ ನೀಡಿದರು. (ವರದಿ: ಕುಶಾಲಪ್ಪ ಕಾಂತುಕುಮೇರಿ)