ಮಿಶ್ರ ತಳಿ ಹೆಣ್ಣು ಕರು ಪ್ರದರ್ಶನ ಸ್ಪರ್ಧೆ: ಪಂಜ ಸಂಘದ ಸದಸ್ಯ ಪುರುಷೋತ್ತಮ ನೆಕ್ಕಿಲ ರವರಿಗೆ ಪ್ರಶಸ್ತಿ

0

ದ.ಕ. ಜಿಲ್ಲಾ ಪಂಚಾಯತ್,ಪಶುಪಾಲನ ಹಾಗೂ ಪಶು ವೈದ್ಯಕೀಯ ಇಲಾಖೆ ಸುಳ್ಯ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು,
ಕೊಲ್ಲಮೊಗ್ರು -ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೊಲ್ಲಮೊಗ್ರು ,ಕಲ್ಮಕಾರು, ಕಟ್ಟ ಗೋವಿಂದನಗರ, ಹರಿಹರ ಪಲ್ಲತ್ತಡ್ಕ, ನಡುಗಲ್ಲು,ಬಾಳುಗೋಡು , ಐನೆಕಿದು ಹಾಲು ಉತ್ಪಾದಕರ ಸಹಕಾರ ಸಂಘಗಳ ಇದರ ಆಶ್ರಯದಲ್ಲಿ ಜ.12 ರಂದು ಕೊಲ್ಲಮೊಗ್ರು ಮಯೂರ ಕಲಾಮಂದಿರದಲ್ಲಿ ಜರುಗಿದ
ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ದೇಸಿ ತಳಿ ವಿಭಾಗದಲ್ಲಿ
ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಪುರುಷೋತ್ತಮ ನೆಕ್ಕಿಲ ರವರ ಹೆಣ್ಣು ಕರುವಿಗೆ ತೃತೀಯ ಸ್ಥಾನ ಲಭಿಸಿದ್ದು, ಅವರಿಗೆ
ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಂಜ ಹಾಲು ಉತ್ಪಾದಕರ ಸಹಕಾರ ಸಂಘದಿಂದ, ಸಂಘದ ಅಧ್ಯಕ್ಷ ಭಾಸ್ಕರ್ ನಾಯಕ್ ಬೇರ್ಯ ನಿರ್ದೇಶಕರಾದ ಚನಿಯಪ್ಪ ಗೌಡ ಕುಳ್ಳಕೋಡಿ, ಗಣೇಶ್ ಪಾಲೋಳಿ , ಪೆರ್ಗಡೆ ಕಾಣಿಕೆ , ಪದ್ಮಯ್ಯ ನಾಯ್ಕ ಸಂಪ, ಶ್ರೀಮತಿ ಲಕ್ಷ್ಮೀ ನೇರಳ, ಶ್ರೀಮತಿ ಯಶೋದ ಬರೆಮೇಲು, ಸಂಘದ ಸದಸ್ಯರಾದ ಸತೀಶ್ ಬೊಳ್ಳಾಜೆ,ವಸಂತ ಕಂರ್ಬು ನೆಕ್ಕಿಲ ,ಶ್ರೀಮತಿ ರಾಜೀವಿ ,ಚೊಮಣ್ಣ ಗೌಡ ಪುತ್ಯ, ಚೆನ್ನಕೇಶವ ಸಂಪ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.