ಪಂಜದಲ್ಲಿ ಅದ್ದೂರಿಯ ಸ್ವಾಗತ, ಮೆರವಣಿಗೆ
ಶಾಸಕಿ ಭಾಗೀರಥಿ ಮುರುಳ್ಯರವರಿಂದ ಚಾಲನೆ
ತೆಲಂಗಾಣದಲ್ಲಿ ನಡೆದ ೧೭ ವರ್ಷದ ಹುಡುಗರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಆ ಪ್ರಯುಕ್ತ ಅದ್ದೂರಿಯ ಸ್ವಾಗತ ಮೆರವಣಿಗೆ ಜ.೧೩ ರಂದು ಪಂಜದಿಂದ ಬೆಳ್ಳಾರೆ ತನಕ ನಡೆಯಿತು.
ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯಿಂದ ಮೆರವಣಿಗೆಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿ ಬಳಿಕ ಅವರನ್ನು ಶಾಲು, ಹಾರ, ಪೇಟ ತೊಡಿಸಿ ಸ್ವಾಗತಿಸಿದರು.
ಬಳಿಕ ಪಂಜ ಪೇಟೆಯಲ್ಲಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷರಾದ ಲಿಗೋಧರ ಆಚಾರ್ಯ, ಲಕ್ಷ್ಮಣ ಗೌಡ ಬೊಳ್ಳಾಜೆ, ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಬರೆಮೇಲು, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಸಂತೋಷ್ ಜಾಕೆ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ರಿಕ್ಷಾ ಚಾಲಕರ ಸಂಘದ ಪೂರ್ವಾಧ್ಯಕ್ಷ ದೇವಪ್ಪ ಏನೆಕಲ್ಲು ,
ದೈಹಿಕ ಶಿಕ್ಷಣ ಶಿಕ್ಷಕಿ ಮತ್ತು ಕರ್ನಾಟಕ ತಂಡದ ವ್ಯವಸ್ಥಾಪಕಿ ಪುಷ್ಪಾವತಿ ಅವರ ಸಹೋದರ ಜಗದೀಶ್ ಪುರಿಯ, ಗ್ರಾಮಸ್ಥರು ಪಾಲ್ಗೊಂಡು ಅವರನ್ನು ಸ್ವಾಗತಿಸಿದರು.
ಬೆಳ್ಳಾರೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಪ್ರಾಂಶುಪಾಲ ಜನಾರ್ದನ ಗೌಡ ಕೆ ಎನ್, ಮುಖ್ಯ ಶಿಕ್ಷಕ ಮಾಯಿಲಪ್ಪ, ಉಪಪ್ರಾಂಶುಪಾಲೆ ಶ್ರೀಮತಿ ಉಮಾಕುಮಾರಿ, ಶಿಕ್ಷಕರು, ಕಟ್ಟಡ ಸಮಿತಿ ಅಧ್ಯಕ್ಷ ಹರ್ಷ ಜೋಗಿಬೆಟ್ಟು , ಶರತ್ ಪೂಗವನ, ಪ್ರದೀಪ್ ಕುಮಾರ್ ರೈ ಪನ್ನೆ, ಸುರೇಶ್ ಕುಮಾರ್ ರೈ ಪನ್ನೆ, ದಿನೇಶ ಹೆಗ್ಡೆ, ಮುರಳಿ ಕೃಷ್ಣ, ಶಿವಾಜಿ, ಜಯರಾಮ ಉಮ್ಮಿಕ್ಕಳ ಶಿಕ್ಷಕರು, ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾಪಟುಗಳು ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಆಗಿಸಿದ್ದು ಕ್ರೀಡಾಪ್ರತಿಭೆಗಳನ್ನು ಹಾಗೂ ಕ್ರೀಡಾಧಿಕಾರಿಯಾದ ಶ್ರೀಮತಿ ಪುಷ್ಪಾವತಿ ಇವರನ್ನು ಸುಬ್ರಹ್ಮಣ್ಯದಿಂದ ಬರಮಾಡಿಕೊಂಡು ಪಂಜ ಪೇಟೆಯಿಂದ ಅದ್ದೂರಿಯ ಮೆರವಣಿಗೆಯ ಮೂಲಕ ಬೆಳ್ಳಾರೆಗೆ ಸಾಗಿತ್ತು. ಶಿಕ್ಷಕ ರಾಮಚಂದ್ರ ನಿರೂಪಿಸಿದರು.
ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಬೆಳ್ಳಾರೆ ಕೆ.ಪಿ.ಎಸ್. ಸಂಸ್ಥೆಯ ೧೦ ನೇ ತರಗತಿಯ ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಕೆಪಿಎಸ್ ನ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಪುಷ್ಪಾವತಿ ಅವರು ಕರ್ನಾಟಕ ತಂಡದ ವ್ಯವಸ್ಥಾಪಕಿಯಾಗಿದ್ದರು.
ಮತ್ತು ಕರ್ನಾಟಕ ತಂಡದ ಕ್ರೀಡಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.