ಸುಳ್ಯ ಶ್ರೀ ರಾಮ ಮಂದಿರ ಸುಳ್ಯದ ಬ್ರಹ್ಮಕಲಶೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಜ.14 ರಂದು ನಡೆಯಿತು. ಸಭೆಯಲ್ಲಿ ವಿವಿಧ ವಾರ್ಡ್ವಾರು ಸಮಿತಿಗಳನ್ನು ರಚನೆ ಮಾಡಲಾಯಿತು.
ದುಗ್ಗಲಡ್ಕ ವಾರ್ಡ್ ಸಂಚಾಲಕರಾಗಿ ದಯಾನಂದ ಸಾಲ್ಯಾನ್, ಸಹಸಂಚಾಲಕರಾಗಿ ಹೇಮಂತ್ ಕಂದಡ್ಕ, ಕೊಯ್ಕುಳಿ ವಾರ್ಡ್ ಸಂಚಾಲಕರಾಗಿ ಶಿವಪ್ರಸಾದ್ ಕುದ್ಪಾಜೆ, ಸಹಸಂಚಾಲಕರಾಗಿ ರಾಮಚಂದ್ರ ಕೊಯ್ಕುಳಿ, ಬೆಟ್ಟಂಪಾಡಿ-ಶಾಂತಿನಗರ ವಾರ್ಡ್ ಸಂಚಾಲಕರಾಗಿ ಆನಂದ ಬೆಟ್ಟಂಪಾಡಿ, ಸಹಸಂಚಾಲಕರಾಗಿ ಅವಿನ್ ಬೆಟ್ಟಂಪಾಡಿ, ಜಟ್ಟಿಪಳ್ಳ ವಾರ್ಡ್ ಸಂಚಾಲಕರಾಗಿ ರಮಾನಚಿದ ರೈ, ಸಹಸಂಚಾಲಕರಾಗಿ ಸರೋಜಿನಿ ಪೆಲ್ತಡ್ಕ, ಕಲ್ಲುಮುಟ್ಲು-ಪರಿವಾರಕಾನ ವಾರ್ಡ್ ಸಂಚಾಲಕರಾಗಿ ಅನಿಲ್ ಕೆ.ಸಿ. ಸಹಸಂಚಾಲಕರಾಗಿ ಜಿನ್ನಪ್ಪ ಪೂಜಾರಿ, ಜಯನಗರ ವಾರ್ಡ್ ಸಂಚಾಲಕರಾಗಿ ಮಾಧವ ಎ. ಜಯನಗರ, ಸಹಸಂಚಾಲಕರಾಗಿ ಸುರೇಂದ್ರ ಕಾಮತ್, ಮತ್ತು ಕೇರ್ಪಳ-ಕುರುಂಜಿಗುಡ್ಡೆ ವಾರ್ಡ್ ಸಂಚಾಲಕರಾಗಿ ಚಂದ್ರಶೇಖರ ಕೇರ್ಪಳ, ಸಹಸಂಚಾಲಕರಾಗಿ ಬಿಂದು ಮೋಹನ್ ಕೇರ್ಪಳ ಆಯ್ಕೆಯಾದರು. ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಾರಾಯಣ ಕೇಕಡ್ಕ ಕಾರ್ಯಕ್ರಮದ ಬಗ್ಗೆ, ಆಹ್ವಾನ ಪತ್ರಿಕೆಯ ವಿತರಣೆ, ಹಸಿರುವಾಣಿ ಮತ್ತು ಅದ್ಧೂರಿಯಾಗಿ ಭಜನಾ ಮೆರವಣಿಗೆಯನ್ನು ಆಯೋಜಿಸುವ ಬಗ್ಗೆ ಮಾಹಿತಿಯನ್ನು ನೀಡಿದರು.
ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯದರ್ಶಿ ವಾಸುದೇವ ನಾಯಕ್ ಕೇರ್ಪಳ, ಪ್ರಚಾರ ಸಮಿತಿಯ ಸಂಚಾಲಕರಾದ ರಾಜು ಪಂಡಿತ್, ಆಡಳಿತ ಧರ್ಮದರ್ಶಿ ಮಂಡಳಿಯ ಸದಸ್ಯರಾದ ಗೋಪಾಲ ಎಸ್. ನಡುಬೈಲು, ಮಹಾಬಲ ಕೇರ್ಪಳ, ಭಾಸ್ಕರ ನಾಯರ್ ಉಪಸ್ಥಿತರಿದ್ದರು.