ಪೆರುವಾಜೆ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭ

0

ಶಿಲ್ಪಿಗಳಿಂದ ದೇವಾಲಯಕ್ಕೆ ನೂತನ ಬ್ರಹ್ಮರಥ ಹಸ್ತಾಂತರ

ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವಕ್ಕೆ ಜ.15 ರಂದು ಚಾಲನೆ ದೊರೆಯಿತು.

ಬೆಳಿಗ್ಗೆ ನೂತನ ಬ್ರಹ್ಮರಥವನ್ನು ರಥ ಶಿಲ್ಪಿಗಳು ಶ್ರೀ ಕ್ಷೇತ್ರಕ್ಕೆ ಹಸ್ತಾಂತರಿಸಿದರು.
ರಥ ಶಿಲ್ಪಿಗಳ ಪರವಾಗಿ ಶಿವಕುಮಾರ್ ಶರ್ಮ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ರಥ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ನೇತೃತ್ವದಲ್ಲಿ ಶಿಲ್ಪಿಗಳು ನೂತನ ರಥವನ್ನು ಶ್ರೀ ಕ್ಷೇತ್ರದ ಪರವಾಗಿ ಸಮಿತಿಗೆ ಹಸ್ತಾಂತರಿಸಿದರು.

ಮೂಡಪ್ಪ ಸೇವೆ
ರಂಗಪೂಜೆ
ರಥ ಸಮರ್ಪಣೆಗೆ ಪೂರ್ವಭಾವಿಯಾಗಿ ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ರಥ ಶುದ್ಧಿ ,ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾಬಲಿ, ಶ್ರೀ ಗಣಪತಿ ದೇವರಿಗೆ ಮೂಡಪ್ಪ ಸೇವೆ, ಶ್ರೀ ದೇವಿಗೆ ದೊಡ್ಡ ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಭಜನಾ ಕಾರ್ಯಕ್ರಮ

ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ತನಕ ಭಜನೆ ನಡೆಯಿತು. ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಬೆಳಗಿಸಿ ಭಜನೆಯಲ್ಲಿ ಪಾಲ್ಗೊಂಡರು. ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ, ಶ್ರೀರಾಮ ಭಜನಾ ಮಂಡಳಿ ಎಣ್ಮೂರು, ಶ್ರೀಹರಿ ಭಜನಾ ಮಂಡಳಿ ದೇವಸ್ಯ ಸವಣೂರು, ಭಕ್ತವೃಂದ ಬೆಳ್ಳಾರೆ, ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಕೊಳಂಬಳ ಉಮಿಕ್ಕಳ, ಶ್ರೀ ಆತ್ಮಾರಾಮ ಭಜನ ಮಂಡಳಿ ಕನಕಮಜಲು, ಶ್ರೀ ವಿಘ್ನೇಶ್ವರ ಭಜನ ಮಂಡಳಿ ನೆಟ್ಟಣ, ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ, ಶ್ರೀ ಜಲದುರ್ಗಾದೇವಿ ಮಕ್ಕಳ ಕುಣಿತ ಭಜನಾ ಮಂಡಳಿ ಪೆರುವಾಜೆ, ಸ್ನೇಹಾಂಜಲಿ ಮಕ್ಕಳ ಕುಣಿತ ತಂಡ ಬೆಳ್ಳಾರೆ ತಂಡದಿಂದ ಭಜನೆ ನಡೆಯಿತು.

ದೇವಸ್ಥಾನದ ತಂತ್ರಿಗಳು, ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸಮಿತಿ ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್. ಮೊದಲಾದವರು ಉಪಸ್ಥಿತರಿದ್ದರು.