ಫೆ.9, 10 ರ ಬದಲು ಎಪ್ರಿಲ್ 13,14 ರಂದು ನಡೆಸಲು ನಿರ್ಧಾರ
ರಾಷ್ಟ್ರೀಯ ಲಗೋರಿ ಅಸೋಸಿಯೇಷನ್ ವತಿಯಿಂದ ಸುಳ್ಯದಲ್ಲಿ ಫೆಬ್ರವರಿ 9 ಮತ್ತು 10 ರಂದು ನಡೆಸಲು ನಿರ್ಧರಿಸಲಾಗಿದ್ದ ರಾಷ್ಟ್ರೀಯ ಲಗೋರಿ ಪಂದ್ಯಾಟವನ್ನು ಮುಂದಿನ ಎಪ್ರಿಲ್ 13 ಮತ್ತು 14 ರಂದು ನಡೆಸಲು ನಿರ್ಧರಿಸಲಾಗಿದೆ.
ಇಂದು ಸುಳ್ಯ ತಾ.ಪಂ.ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಲಗೋರಿ ಸಂಘಟನಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
” ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯ ಲಗೋರಿ ಅಸೋಸಿಯೇಷನ್ ನವರು ಫೆಬ್ರವರಿ ತಿಂಗಳಲ್ಲಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಗಳಿರುವುದರಿಂದ ಭಾಗವಹಿಸಲು ಕಷ್ಟವಾಗುವುದಾಗಿ ಹೇಳಿದ್ದಾರೆ” ಎಂದು ಲಗೋರಿ ಅಸೋಸಿಯೇಷನ್ ಅಧ್ಯಕ್ಷ ರಾದ ದೊಡ್ಡಣ್ಣ ಬರೆಮೇಲು ಹೇಳಿದರು. ಬಳಿಕ ಚರ್ಚೆ ನಡೆದು ಲೋಕಸಭಾ ಚುನಾವಣೆಗಿಂತ ಮೊದಲು ಎಪ್ರಿಲ್ 13 ಮತ್ತು 14 ರಂದು ರಾಷ್ಟ್ರೀಯ ಲಗೋರಿ ಪಂದ್ಯಾಟ ನಡೆಸಲು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘಟನಾ ಸಮಿತಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ವಹಿಸಿದ್ದರು. ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಹರೀಶ್ ಉಬರಡ್ಕ, ಸದಸ್ಯರುಗಳಾದ ದಿನೇಶ್ ಮಡಪ್ಪಾಡಿ, ಪಿ.ಎಸ್.ಗಂಗಾಧರ್, ಕೆ.ಎಂ.ಮುಸ್ತಫ, ಕೆ.ಗೋಕುಲದಾಸ್, ಹರಿಪ್ರಕಾಶ್ ಅಡ್ಕಾರ್, ಡಾ.ಎನ್.ಎ.ಜ್ಞಾನೇಶ್, ನಿತಿನ್ ಮಜಿಕೋಡಿ, ಭವಾನಿಶಂಕರ್ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ತೀರ್ಥವರ್ಣ ಬಳ್ಳಡ್ಕ ಉಪಸ್ಥಿತರಿದ್ದರು.