48 ದಿನಗಳ ಕಾಲ ಪ್ರಾತ:ಕಾಲದಲ್ಲಿ ಯೋಗ ಶಿಕ್ಷಣ ಶಿಬಿರದ ಆಯೋಜನೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತ್ರಾವತಿ ವಲಯ ಸುಳ್ಯ ಹಾಗೂ ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಉಚಿತ ಯೋಗ ಶಿಕ್ಷಣ ತರಗತಿಯು ಜ.14 ರಂದು ಉದ್ಘಾಟನೆಗೊಂಡಿತು.
ಸಹಕಾರಿ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ ದೀಪ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಪಿ.ವೈ.ಎಸ್.ಎಸ್. ಜಿಲ್ಲಾ ಸಂಚಾಲಕ ಜಯರಾಮ,
ಯೋಗ ಶಿಕ್ಷಕರಾದ ರಾಜೇಶ್ ಆಲೆಟ್ಟಿ, ಸುನಂದಾ ಶೆಟ್ಟಿ,
ನಿಶಿತಾ ಕೇರ್ಪಳ, ಸತ್ಯವತಿ,ಸುನೀತಾ ಉಪಸ್ಥಿತರಿದ್ದರು.
ಪ್ರತಿದಿನ ಪ್ರಾತ:ಕಾಲ ಗಂಟೆ 5.00 ರಿಂದ ಯೋಗ ತರಗತಿಯು ಸಂಪೂರ್ಣ ಉಚಿತವಾಗಿ ದ್ದು ಸಹಕಾರಿ ಸಂಘದ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯುತ್ತಿದೆ. ಈಗಾಗಲೇ ಸುಮಾರು 60 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ. ಗ್ರಾಮದ ಕೋಲ್ಚಾರು, ಬಡ್ಡಡ್ಕ,ನಾರ್ಕೋಡು,
ಆಲೆಟ್ಟಿ ಪರಿಸರದ ಪುರುಷರು ,ಮಹಿಳೆಯರು ಭಾಗವಹಿಸುತ್ತಿದ್ದಾರೆ.
10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾಗವಹಿಸಲು ಅವಕಾಶವಿದೆ.
48 ದಿನಗಳ ಕಾಲ ನುರಿತ ಯೋಗ ಶಿಕ್ಷಕರಿಂದ ತರಗತಿಗಳು ನಡೆಯಲಿದೆ ಎಂದುಎಸ್.ಪಿ.ವೈ.ಎಸ್.ಸಮಿತಿಯ ಸಂಘಟಕರು ತಿಳಿಸಿರುತ್ತಾರೆ.