ಅರಂತೋಡು ಗ್ರಾಮ ಪಂಚಾಯತ್‌ನಲ್ಲಿ ಜ. 1೦ ರಂದು ಆರಂಭವಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮತ್ತು 14 & 15 ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತ್ ನ ಅಮೃತ ಸಭಾಂಗಣ ದಲ್ಲಿ ನಡೆಯಿತು .
ಸಭೆಯಲ್ಲಿ ನೋಡೆಲ್ ಅಧಿಕಾರಿಗಳಾಗಿ ಶ್ರೀಮತಿ ವೀಣಾ ಸಹಾಯಕ ನಿರ್ದೇಶಕರು ,ಪ್ರಧಾನ್ ಮಂತ್ರಿ ಪೋಷಣ್ ನಿರ್ಮಾಣ್ ತಾಲೂಕು ಪಂಚಾಯತ್ ಸುಳ್ಯ ಇವರು ಭಾಗವಹಿಸಿದರು. ಉಪವಲಯ ಅರಣ್ಯಾಧಿಕಾರಿಗಳಾದ ಮಂಜುಳಾ, ಉದ್ಯೋಗ ಖಾತರಿ ಯೋಜನೆಯಯ ತಾಂತ್ರಿಕ ಅಭಿಯಂತರುಗಳಾದ ಶ್ರೀಮತಿ ರಶ್ಮಿ, ಪ್ರಮೀಳಾ , ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ , ಉಪಾಧ್ಯಕ್ಷೆ ಶ್ರೀಮತಿ ಭವಾನಿ ಸಿ.ಎ., ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಂ. ಆರ್., ಸಾಮಾಜಿಕ ಪರಿಶೋಧನೆಯ ತಾಲೂಕು ಸಂಯೋಜಕರಾದ ಸೌಮ್ಯ ನಾಯಕ್ ಮತ್ತು ಅವರ ತಂಡದವರು , ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದರು. ಸಾಮಾಜಿಕ ಪರಿಶೋಧನಾ ತಂಡವು ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ ವರದಿ ಮಂಡಿಸಿದರು.