ಏನೆಕಲ್ಲು ಗ್ರಾಮದಲ್ಲಿರುವ ಕೋಡಿಬೈಲು ಕುಟುಂಬದ ದೈವಗಳ ಪ್ರತಿಷ್ಠಾ ಕಲಶೋತ್ಸವ ಹಾಗೂ ಧರ್ಮನಡಾವಳಿ ಕಾರ್ಯಕ್ರಮ ತಂತ್ರಿಗಳಾದ ಪ್ರಸಾದ್ ಪಂಗಾಣ್ಣಾಯರವರ ನೇತೃತ್ವದಲ್ಲಿಜ ೧೬ ರಿಂದ ೧೮ರವರೆಗೆ ಕೋಡಿಬೈಲು ತರವಾಡು ಮನೆಯಲ್ಲಿ ನಡೆಯಿತು.
ಜ. ೧೬ ರಂದು ತಂತ್ರಿಗಳ ಆಗಮನವಾಗಿ ವೈದಿಕ ಕಾರ್ಯಕ್ರಮಗಳು ನಡೆದವು. ೧೭ ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಹೋಮ, ದೈವಗಳ ಪ್ರತಿಷ್ಠೆ, ಕಲಶ ಅಭಿಷೇಕ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು. ನಂತರ ಸಂಜೆ ಐದರಿಂದ ದೈವಗಳ ಭಂಡಾರ ತೆಗೆದು ಕ್ರಮವಾಗಿ ಕಲ್ಲುರ್ಟಿ ದೈವದ ನೇಮ, ಕೊರತ್ತಿ, ವರ್ಣರ ಪಂಜುರ್ಲಿ, ವ್ಯಾಘ್ರ ಚಾಮುಂಡಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ ನಡೆದು, ಜ. ೧೮ರಂದು ರುದ್ರ ಚಾಮುಂಡಿ ದೈವದ ನೇಮೋತ್ಸವ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಕೋಡಿಬೈಲು ಕುಟುಂಬಸ್ಥರು ಸೇರಿದಂತೆ ಬಂಧುಗಳು ಆಗಮಿಸಿ ದೈವದ ಪ್ರಸಾದವನ್ನು ಸ್ವೀಕರಿಸಿದರು. ಕುಟುಂಬದ ಹಿರಿಯರಾದ ತಿಮ್ಮಪ್ಪ ಗೌಡ ಕೋಡಿಬೈಲು ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು. (ಚಿತ್ರ ವರದಿ ದಿನೇಶ್ ಹಾಲೆಮಜಲು)