ಗ್ರಾಮೀಣ ಉದ್ಯೋಗ ಸೃಷ್ಟಿ ಗೆ ಸೆಲ್ಕೋದಿಂದ ಶೇ.25 ಅನುದಾನ

0

ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಯೋಜನೆಗೆ ಸೆಲ್ಕೋ ಸೋಲಾರ್ ಸಂಸ್ಥೆಯು ಬ್ಯಾಂಕುಗಳ ಆರ್ಥಿಕ ಸಹಕಾರದೊಂದಿಗೆ ಸ್ವ ಉದ್ಯೋಗ ಉಪಕರಣ ಅಳವಡಿಕೆ ಮಾಡುವವರಿಗೆ ಶೇ 25 ರಷ್ಟು ಅನುದಾನ ನೀಡಲಾಗುವುದು ಹೇಳಿ ಸೆಲ್ಕೋ ಸಂಸ್ಥೆಯ ಜೀವನೋಪಾಯ ಇಲಾಖೆ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಸಾದ್ ಬಿ ಅವರು ಮಾದ್ಯಮಕ್ಕೆ ಮಾಹಿತಿ ನೀಡಿದರು .

ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳನ್ನು ಒದಗಿಸುವ ಮೂಲಕ ಬಡತನ ನಿರ್ಮೂಲನೆಯಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿದೆ . ಪರಿಸರಕ್ಕೆ ಪೂರಕವಾದ ಸೌರ ಇಂಧನವನ್ನು ಬಳಸಿಕೊಂಡು ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 25 ಸಾವಿರ ಸ್ವ ಉದ್ಯೋಗಿಗಳನ್ನು ಸೃಷ್ಟಿ ಸುವ ನಿಟ್ಟಿನಲ್ಲಿ ಸೆಲ್ಕೋ ಸಂಸ್ಥೆ ಕೆಲಸ ಮಾಡುತ್ತಿದೆ .

ಈ ಗುರಿಯ ಅಂಗವಾಗಿ ಸುಳ್ಯ ತಾಲ್ಲೂಕಿನಲ್ಲಿ ಗ್ರಾಮ ಮಟ್ಟ ಹಾಗೂ ನಗರ ಪ್ರದೇಶಗಳಲ್ಲಿ ವ್ಯಾಪಾರಿಗಳಿಗೆ ಸ್ವ ಉದ್ಯೋಗ ತರಬೇತಿ ಕಾರ್ಯಗಳನ್ನು ನಡೆಸುತ್ತಿದ್ದೆ ಹೇಳಿದರು .
ಸೋಲಾರ್ ಆಧಾರಿತ ಹಪ್ಪಳ , ರೊಟ್ಟಿ , ಚಿಪ್ಸ್ , ಪಾನಿಪುರಿ ತಯಾರಿಕಾ ಯಂತ್ರ , ಸೋಲಾರ್ ಆಧಾರಿತ ಫ್ರಿಡ್ಜ್ , ಟೈಲರಿಂಗ್ , ಹಾಲುಕರೆಯುವ ಯಂತ್ರ , ಕಬ್ಬಿನ ಹಾಲು ಯಂತ್ರ , ಕೋಳಿ ,ಹಂದಿ ,ಮೀನು ಸಾಕಾಣಿಕೆ ಘಟಕಕ್ಕೆ ಸೋಲಾರ್ ಅಳವಡಿಕೆ , ಬೀದಿವ್ಯಾಪಾರ ,ಮೊಬೈಲ್ ಕ್ಯಾಂಟೀನ್ ಅಳವಡಿಕೆ ಹಾಗೂ ಗ್ರಾಹಕರ ಅವಶ್ಯಕತೆ ಗಳಿಗೆ ಅನುಸಾರವಾಗಿ ಹೋಟೆಲ್ , ಗ್ರಾಹಕರ ಕೇಂದ್ರ ,ಮೆಡಿಕಲ್ ಗಳಿಗೆ ಸೆಲ್ಕೋ ಉಪಕರಣ ಸಜ್ಜುಗೊಳಿ ಸುತ್ತದೆ ಎಂದರು , ಈ ಯೋಜನೆ ವಿದ್ಯುತ್ ಸಮಸ್ಯೆಯಿಂದ ಗ್ರಾಮೀಣ ಹಾಗೂ ನಗರ ಭಾಗವನ್ನು ಮುಕ್ತಗೊಳಿಸುವುದಲ್ಲದೆ ನವೀಕರಿಸಬಹುದಾದ ಇಂಧನ ದಿಂದ ಸುಸ್ಥಿರತೆಯನ್ನು ಕಾಪಾಡಬಹುದು ತಂತ್ರ ಜ್ಞಾನ ಮುಕಾಂತರ ಒಳ್ಳೆಯ ಸಂಪನ್ಮೂಲ ಸೃಸ್ಟಿ ಮಾಡಿ ಗ್ರಾಮೀಣ ಆರ್ಥಿಕತೆಯ ಅಡಿಪಾಯವನ್ನು ಬಲ ಪಡಿಸಬಹುದು ಎಂಬ ದೃಷ್ಟಿಯಿಂದ ಈ ಯೋಜನೆ ಆರಂಭಿಸಲಾಗಿದೆ ಹೇಳಿ ಇದನ್ನು ಸದುಪಯೋಗ ಪಡಿಸಲು ಹೇಳಿದರು .