ಸುಬ್ರಹ್ಮಣ್ಯ: ಘನ ತ್ಯಾಜ್ಯ ಘಟಕಕ್ಕೆ ಫಿಲ್ಟರ್ ವಾಟರ್ ಮೆಶಿನ್ ಕೊಡುಗೆ

0

ಸುಬ್ರಹ್ಮಣ್ಯ ಗ್ರಾ.ಪಂ ನ ಘನ ತ್ಯಾಜ್ಯ ಘಟಕಕ್ಕೆ ಹರೀಶ್ ಕಾಮತ್ ಸಹೋದರರು ಫಿಲ್ಟರ್ ವಾಟರ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.

ಘನ ತ್ಯಾಜ್ಯ ಘಟಕ ಸಿಬ್ಬಂದಿಗಳ ಉಪಯೋಗಕ್ಕಾಗಿ ಫಿಲ್ಟರ್ ವಾಟರ್ ಯಂತ್ರವನ್ನು ಹರೀಶ್ ಕಾಮತ್ ಅವರು ಜ.20 ರಂದು ಹಸ್ತಾಂತರಿಸಿದರು. ಓಂ ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಘಟಕದ ಸುಜಾತಾ ಗಣೇಶ್, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.