ಪತ್ರಿಕಾಗೋಷ್ಠಿ ನಡೆಸಿದ ಮನೆಯ ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆಯೆ?
ಅಗತ್ಯದಷ್ಟೇ ನಾಮಪತ್ರ ಇದ್ದರೆ ಚುನಾವಣೆ ನಡೆಸುವುದು ಹೇಗೆ ?
ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಗಳ ನಾಯಕಿಯರು ಅಧಿಕಾರಕ್ಕಾಗಿ ಬಿಜೆಪಿ ನಾಯಕಿಯರ ಜೊತೆ ಹೊಂದಾಣಿಕೆ ಮಾಡಿಕೊಂಡು ಮಹಿಳಾ ಸೊಸೈಟಿಯಲ್ಲಿ ಅವಿರೋಧ ಆಯ್ಕೆ ಮಾಡಿಕೊಂಡಿದ್ದಾರೆಂದು ಕಾಂಗ್ರೆಸ್ ನಾಯಕ ಗೋಕುಲ್ ದಾಸ್ ಮತ್ತಿತರರು ಪತ್ರಿಕಾಗೋಷ್ಠಿ ನಡೆಸಿ ನೀಡಿದ ಹೇಳಿಕೆಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್ ನಾಯಕಿ, ಮಹಿಳಾ ಸೊಸೈಟಿಯ ಅಧ್ಯಕ್ಷೆ ಶ್ರೀಮತಿ ರಾಜೀವಿ ರೈಯವರು, ” ಮಹಿಳಾ ಸಹಕಾರ ಸಂಘಕ್ಕೆ ಸಂಬಂಧಪಡದವರು ಅನಗತ್ಯವಾಗಿ ರಾಜಕೀಯ ದುರುದ್ಧೇಶದಿಂದ ಆರೋಪ ಮಾಡುತ್ತಿದ್ದಾರೆ ” ಎಂದು ಹೇಳಿದ್ದಾರೆ.
ಚುನಾವಣೆಗೆ ನಾಮಪತ್ರ ಹಾಕಿದರೆ ಮಾತ್ರ ಚುನಾವಣೆ ನಡೆಯುತ್ತದೆ. ಅಗತ್ಯವಿದ್ದಷ್ಟು ಮಾತ್ರ ನಾಮಪತ್ರವಿದ್ದರೆ ಚುನಾವಣೆ ನಡೆಯುತ್ತದೆಯೆ? ಅವಿರೋಧವಾಗಿಯೇ ಆಯ್ಕೆ ಮಾಡಬೇಕಾಗುತ್ತದೆ. ಇದರಲ್ಲಿ ಎಡ್ಜಸ್ಟ್ಮೆಂಟ್ ರಾಜಕೀಯ ಏನಿದೆ? ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ತನ್ನ ಹೆಂಡತಿಯನ್ನು ಅಥವಾ ಮನೆಯವರನ್ನು ಚುನಾವಣೆಗೆ ನಿಲ್ಲಿಸಿ ಚುನಾವಣೆ ನಡೆಸದೇ ಇದ್ದರೆ ಅವರು ಪತ್ರಿಕಾಗೋಷ್ಠಿ ನಡೆಸುವುದು ಸರಿ? ಅಥವಾ ಅವರೇ ಸದಸ್ಯರಾಗಿದ್ದರೆ ಅವರು ಮಾತನಾಡಬೇಕು, ಸಂಘದ ಸದಸ್ಯತ್ವ ಅವರಿಗೆ ನೀಡಲೂ ಸಾಧ್ಯವಿಲ್ಲದಿರುವುದರಿಂದ ಅನಗತ್ಯ ವಾಗಿ ಹೇಳಿಕೆ ನೀಡಬಾರದು ಎಂದು ಹೇಳಿದ ಅವರು, ನಾವು ಯಾರನ್ನು ನಾಮಿನೇಶನ್ ಹಾಕಿ ಅಥವಾ ತೆಗೆಯಿರಿ ಎಂದು ಹೇಳಿಲ್ಲ ಎಂದು ರಾಜೀವಿ ರೈ ಹೇಳಿದ್ದಾರೆ.