ದೇವರಕೊಲ್ಲಿ ಬಳಿ ಸಂಭವಿಸಿದ ಟ್ಯಾಂಕರ್ ಮತ್ತು ದ್ವಿಚಕ್ರ ವಾಹನ ಅಪಘಾತ ಘಟನೆಯಲ್ಲಿ ಸುಳ್ಯದ ಯುವಕರು ಮಾನವೀಯತೆ ಮೆರೆದು ಪ್ರಶಂಶೆಗೆ ಪಾತ್ರರಾದರು.
ಅಪಘಾತ ನಡೆದ ಸಂದರ್ಭ ಮಡಿಕೇರಿಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ಸುಳ್ಯ ಜಯನಗರ ನಿವಾಸಿಗಳಾದ ಫಾತಿಮಾ, ಶಮೀರ್ ಕಾಣಿಯೂರು,ಆಫ್ರಿದಿ ರವರು, ಸ್ಥಳೀಯರೊಂದಿಗೆ ಸೇರಿ ಗಾಯಾಳುಗಳನ್ನು ಆಂಬುಲೆನ್ಸ್ ವಾಹನ,ಹಾಗೂ ಸ್ಥಳೀಯರ ಜೀಪಿನಲ್ಲಿ ತರಲು ಸಹಕರಿಸಿದರು.
ಬಳಿಕ ಓರ್ವ ಗಾಯಾಳುವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು ಅವರ ಪರಿಸ್ಥಿತಿ ಗಂಭೀರವಾಗಿತ್ತು. ಈ ಸಂದರ್ಭ ಪ್ರಥಮ ಚಿಕಿತ್ಸಾ ಘಟಕದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಾಯಾಳು ವಿನೊಂದಿಗೆ ಇದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ಸೂಚಿಸಿದಾಗ ಸ್ಪಂದಿಸಿ ಅಂಬುಲೆನ್ಸ್ ವಾಹನದಲ್ಲಿ ಗಾಯಾಳು ವಿನೊಂದಿಗೆ ಮಂಗಳೂರಿಗೆ ತೆರಳಿದರು. ಆಂಬುಲೆನ್ಸ್ ಚಾಲಕ ರಫೀಕ್ ಬಾಳೆಮಕ್ಕಿ ಈ ಸಂದರ್ಭದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು.
ಗಾಯಾಳುವಿನ ಪರಿಚಯ ಮತ್ತು ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಆಂಬುಲೆನ್ಸ್ ವಾಹನದಲ್ಲಿ ಹೋಗುವುದ್ಯಾರು ಎಂಬ ಪ್ರಶ್ನೆ ಬಂದಾಗ ಈ ಆಸ್ಪತ್ರೆಯಲ್ಲಿದ್ದ ಫೈಝಲ್ ಜಯನಗರ,ಆಫ್ರೀದ್ ಗಾಯಾಳು ವಿನೊಂದಿಗೆ ಮಂಗಳೂರಿಗೆ ತೆರಳಲು ಸಿದ್ದರಾದರು.
ಇವರ ಈ ಮಾನವೀಯತೆ ಶ್ಲಾಘನೆಗೆ ಪಾತ್ರವಾಯಿತು.