ಎಡಮಂಗಲ ಸ.ಹಿ.ಪ್ರಾ ಶಾಲೆಗೆ ISF ಮತ್ತು IEEE ವತಿಯಿಂದ ಸ್ಮಾರ್ಟ್ ಟಿವಿ ಕೊಡುಗೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲದಲ್ಲಿ IEEE ನ ರಾಷ್ಟ್ರೀಯ ಮುಖ್ಯಸ್ಥರಾದ ಚಂದ್ರಶೇಖರ ಜ. 18ರಂದು ದೀಪ ಬೆಳಗಿಸಿ ಸ್ಮಾರ್ಟ್ ಟಿವಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾರತ ಲೋಕೋಪಕಾರಿ ವ್ಯವಸ್ಥಾಪಕ ಅಶೋಕ್ ವಿಠ್ಠಲ್, ಕರ್ನಾಟಕ
ರಾಜ್ಯ ಸಂಯೋಜಕರಾದ ಸ್ವರಾಜ್ ಎಚ್.ವಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಕು. ಗಾಯತ್ರಿ ಸಿ.ವಿ, ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಶೀನಪ್ಪ ನಾಯ್ಕ ಮುಳ್ಯ, ಎಡಮಂಗಲ ಗ್ರಾ. ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಚೈತ್ರ ಹಾಗೂ ಸದಸ್ಯರು, ಪೋಷಕರು, ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.