ದಿ ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿ, ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಅಂಬರೀಶ್ ಯು.ಕೆ ಅಧಿಕಾರ ಸ್ವೀಕರಿಸಿರುತ್ತಾರೆ. ಸಂಪಾಜೆ ಗ್ರಾಮದ ಬಾಚಿಗದ್ದೆ ಕೃಷ್ಣಪ್ಪಗೌಡ ಪುಷ್ಪಾವತಿ ದಂಪತಿಗಳ ಪುತ್ರರಾದ ಇವರು ಮಂಗಳೂರಿನಲ್ಲಿ ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಶ್ರೀಮತಿ ನವನೀತ ಅಂಬರೀಶ್ ಇವರು ಮಂಗಳೂರಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದು ಪುತ್ರಿ ಕುಮಾರಿ ವಂಶಿ ಮಂಗಳೂರಿನ ಶಾರದಾ ವಿದ್ಯಾಲಯದ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿರುತ್ತಾಳೆ.