ಮೂರನೇ ಬಾರಿ ಕಾಡಿನೊಳಗೆ ಹೋದ ಮರಿಯಾನೆ ವಾಪಸ್ ಬಂದಿಲ್ಲ…!
ಇಂದು ಬೆಳಗ್ಗೆ ಮಂಡೆಕೋಲು ಕನ್ಯಾನ ಶಾಲೆಯ ಬಳಿ ಕಾಡಾನೆಗಳ ಗುಂಪಿನಿಂದ ಬೇರ್ಪಟ್ಟ ಮರಿಯಾನೆಯೊಂದು ಪತ್ತೆಯಾಗಿದ್ದು, ಅದನ್ನು ಆನೆಗಳ ಗುಂಪಿನಲ್ಲಿ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದೆ.
ಕನ್ಯಾನ ಶಾಲೆಯ ಸಮೀಪ ಎರಡು ತಿಂಗಳ ಮರಿಯಾನೆಯೊಂದು ಘೀಳಿಡುವ ವಿಷಯ ತಿಳಿದು ಅರಣ್ಯ ಇಲಾಖೆಯವರು ಇಂದು ಬೆಳಗ್ಗೆ ಸ್ಥಳಕ್ಕೆ ಹೋಗಿ ಮರಿಯಾನೆಯನ್ನು ತಮ್ಮ ವಶಕ್ಕೆ ಪಡೆದರು.
ಬಳಿಕ ಅರಣ್ಯ ಇಲಾಖಾ ಅಧಿಕಾರಿಗಳು, ವೈದ್ಯಾಧಿಕಾರಿಗಳು ಬಂದು ತಪಸಣೆ ನಡೆಸಲಾಯಿತು. ಆನೆ ಮರಿ ಆರೋಗ್ಯ ವಾಗಿತ್ತು.
ಬಳಿಕ ಆನೆ ಮರಿಯನ್ನು ಆನೆಗಳ ಗುಂಪಿಗೆ ಸೇರಿಸಲು ಅರಣ್ಯ ಇಲಾಖೆಯವರು ಪ್ರಯತ್ನ ನಡೆಸಿದರು. ಆನೆಗಳ ಗುಂಪು ಬೊಳುಗಲ್ಲು ವ್ಯಾಪ್ತಿಯ ಕಾಡಿನಲ್ಲಿರುವ ಮಾಹಿತಿ ಪಡೆದು, ಮರಿಯನ್ನು ಕಾಡಿನೊಳಗೆ ಕರೆದೊಯ್ಯಲಾಯಿತು. ಹೀಗೆ ಎರಡು ಬಾರಿ ಮರಿಯನ್ನು ಕಾಡಿನೊಳಗೆ ಬಿಟ್ಟು ಬಂದ ಅರಣ್ಯ ಸಿಬ್ಬಂದಿಗಳು, ವಾಪಸ್ ಹೋಗುವಾಗ ಆನೆ ಮರಿ ಗುಂಪಿನಲ್ಲಿ ಸೇರಿರಲಿಲ್ಲ. ಸಂಜೆ ವೇಳೆಗೆ ಮತ್ತೆ ಗುಂಪಿಗೆ ಸೇರಿಸುವ ಪ್ರಯತ್ನ ನಡೆಸಲಾಗಿದೆ. ಆನೆ ಮರಿ ಕಾಡಿನೊಳಗೆ ಹೋಗಿದ್ದು, ವಾಪಸ್ ಬಂದಿಲ್ಲವೆಂದು ತಿಳಿದುಬಂದಿದೆ.
“ಮರಿಯಾನೆಯನ್ನು ಗುಂಪಿನಲ್ಲಿ ಸೇರಿಸುವ ಪ್ರಯತ್ನ ನಡೆಸಿದ್ದೇವೆ. ಎರಡು ಬಾರಿ ಕಾಡಿನಲ್ಲಿ ಬಿಟ್ಟಾಗ ಮರಿ ವಾಪಸ್ ಬಂದಿದೆ. ಮೂರನೇ ಬಾರಿ ಬಿಟ್ಟು ಬಂದಾಗ ವಾಪಸ್ ಬಂದಿಲ್ಲ. ನಾವು ಈ ಕುರಿತು ನಿಗಾ ವಹಿಸುತಿದ್ದೇವೆ”
ಮಂಜುನಾಥ್ ಆರ್.ಎಫ್ ಒ ಸುಳ್ಯ