ಇಂದು ಧ್ವಜಾರೋಹಣ – ಜ.23ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ
ಜ.22ರಂದು ನೃತ್ಯೋತ್ಸವ
ಸುಳ್ಯ ತಾಲೂಕು ಹಾಗೂ ಕಾಸರಗೋಡಿನ ಗಡಿಪ್ರದೇಶದ ಊರಿನಲ್ಲಿರುವ ಇತಿಹಾಸ ಪ್ರಸಿದ್ಧ, ಕಾರಣಿಕ ಕ್ಷೇತ್ರ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವ ವವು ಜ.19ರಿಂದ ಜ.23ರವರೆಗೆ ನಡೆಯಲಿದೆ. ಇಂದು ಧ್ವಜಾರೋಹಣ ಹಾಗೂ ಉಗ್ರಾಣ ತುಂಬಿಸುವುದು, ಹಸಿರುವಾಣಿ ಮೆರವಣಿಗೆ ಕಾರ್ಯಕ್ರಮ ನಡೆಯಿತು.
ಜ.20ರಂದು ನಡು ಬೆಳಕು, ಕುಣಿತ ಭಜನೆ, ಧಾರ್ಮಿಕ ಉಪನ್ಯಾಸ, ಜಾನಪದ ನೃತ್ಯಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದೆ.
ಜ.21ರಂದು ನಡು ದೀಪೋತ್ಸವ, ಭಜನೆ, ತಿರುವಾದಿರ, ಭರತನಾಟ್ಯ, ಜಾನಪದ ನೃತ್ಯ, ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದೆ.
ಜ.22ರಂದು ನೃತ್ಯೋತ್ಸವ, ಧಾರ್ಮಿಕ ಉಪನ್ಯಾಸ, ತಿರುವಾದಿರ, ಜಾನಪದ ನೃತ್ಯಗಳು, ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದೆ.
ಜ.23ರಂದು ಆರಾಟು ಮಹೋತ್ಸವ, ಭಕ್ತಿಗಾನ ಸುಧಾ, ಆರಾಟು ಮೆರವಣಿಗೆ ನಡೆಯಲಿದೆ.