ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗಚೀಟಿ ಹೊಂದಿರುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಸಂಜೀವಿನಿ ಕಟ್ಟಡದಲ್ಲಿ ನಿರ್ಮಾಣಗೊಂಡಿರುವ ಕೂಸಿನ ಮನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರು ಜ.20ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್ ಮಾಜಿ ಅಧ್ಯಕ್ಷರುಗಳಾದ ಜಿ ಕೆ. ಹಮೀದ್ ಗೂನಡ್ಕ, ಜಗದೀಶ್ ರೈ ಸಂಪಾಜೆ, ಸುಂದರಿ ಮುಂಡಡ್ಕ, ಸದಸ್ಯರುಗಳಾದ ವಿಮಲಾ ಪ್ರಸಾದ್, ರಜನಿ ಶರತ್, ಅನುಪಮಾ, ಅಂಗನವಾಡಿ ಮೇಲ್ವಿಚಾರಕರಾದ ದೀಪಿಕಾ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕಿ ಸರೋಜಿನಿ, ಕೋ ಆರ್ಡಿನೇಟರ್ ನಮಿತಾ, ಕಮ್ಯುನಿಟಿ ಹೆಲ್ತ್ ಆಫೀಸರ್ ಚಿತ್ರಕಲಾ ಹಾಗೂ ಹರ್ಷಿತ
ಕುಮಾರಿ ಅಂಗನವಾಡಿ ಕಾರ್ಯಕರ್ತರುಗಳಾದ ಜಯಂತಿ, ಶಾರದಾ, ಧರ್ಮಕಲಾ, ಹರ್ಷಿತಕುಮಾರಿ ಜಯಲಕ್ಷ್ಮಿ, ಪುಷ್ಪ, ಶೀಲಾವತಿ ಆಶಾ ಕಾರ್ಯಕರ್ತರಾದ ಸೌಮ್ಯ, ಪ್ರೇಮಲತಾ,ಆಶಾ ವಿನಯ್ ಸಂಜೀವಿನಿ ಒಕ್ಕೂಟದ ಕಾಂತಿ ಬಿ. ಎಸ್ ಹಾಗೂ ಸೌಮ್ಯ, ಭಾರತಿ ಉದ್ಯೋಗ ಖಾತ್ರಿ ಕಾಯಕ ಬಂದು ಸವಿತಾ ಕಿಶೋರ್ ಕೇರ್ ಟೆಕರ್ ಹರಿಣಾಕ್ಷಿ ಹಾಗೂ ದಿವ್ಯಾ ಸಿಬ್ಬಂದಿ ಹಸೀನಾ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ ಯೋಜನೆಯ ಅನುಷ್ಠಾನ ಬಗ್ಗೆ ಮಾಹಿತಿ ನೀಡಿದರು. ಸವಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.