ದಾರುಲ್ ಹಿಕ್ಮಾ ಶಾಲೆಯಲ್ಲಿ ಮೆಟ್ರಿಕ್ ಮೇಳ – ಸಂಭ್ರಮಿಸಿದ ವಿದ್ಯಾರ್ಥಿಗಳು

0

ಬೆಳ್ಳಾರೆ: ಇಲ್ಲಿನ‌ ದಾರುಲ್ ಹಿಕ್ಮಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮೆಟ್ರಿಕ್ ಮೇಳ( ಮಕ್ಕಳ ಸಂತೆ) ಬಹಳ ವಿಜ್ರಂಭಣೆಯಿಂದ ನಡೆಯಿತು..

ಮೇಳವನ್ನು ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಮಹಮೂದ್ ಬಿ.ಎ ಅವರು ಉದ್ಘಾಟಿಸಿದರು. ಹಿಫಲ್ ವಿದ್ಯಾರ್ಥಿ ಖಾದ್ರಿಲ್ ಔಫ್ ರವರು ಖುರಾನ್ ಪಠಿಸುವುದರ ಮೂಲಕ ಕಾರ್ಯಕ್ರಮಗಳನ್ನು ಚಾಲನೆ ನೀಡಿದರು..ಮುಖ್ಯ ಅಥಿತಿಗಳಾಗಿ ಆಗಮಿಸಿದ ಸುಳ್ಯ ಅಲ್ಪ ಸಂಖ್ಯಾತ ದೊಡ್ಡ ಪ್ರಮಾಣದ ವಿವಿದೊದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಹಮೀದ್ ಆಲ್ಫಾ , ಉದ್ಯಮಿ ಹಸನ್ ಹಾಜಿ ಇಂದ್ರಾಜೆ ,ಅಶ್ರಫ್ ಎನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಲೈಮಾನ್ ರವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ‌ ಸಬಿದಾ ರವರು ಆತ್ಮೀಯದಿಂದ ಸ್ವಾಗತಿಸಿದರು.

ಮೇಳದಲ್ಲಿ ಸುಮಾರು ಇಪ್ಪತೈದಕ್ಕೂ ಹೆಚ್ಚು ಸ್ಟಾಲ್ ಗಳನ್ನು ವಿದ್ಯಾರ್ಥಿಗಳು ಅಳವಡಿಸಿದ್ದು, ತರಕಾರಿ, ಸಿಹಿತಿಂಡಿ, ಅಟಿಕೆ ಸಾಮಾನು, ಫ್ಯಾನ್ಸಿ ಐಟಂ, ಮೆಹಂದಿ ಡಿಸೈನ್, ಅಲ್ಲದೇ ಇನ್ನಿತರ ಸ್ಟಾಲ್ ಗಳು ಒಂದನ್ನೊಂದು ಮೀರುವಂತಿತ್ತು..ಸರಿ ಸುಮಾರು ಮುನ್ನೂರಕ್ಕೂ ಅಧಿಕ ಗ್ರಾಹಕರು (ಪೋಷಕರು ಮತ್ತು ಶಿಕ್ಷಕರು) ಈ ಮೇಳದಲ್ಲಿ ಪಾಲ್ಗೊಂಡು ಖರೀದಿಸಿ ವಿದ್ಯಾರ್ಥಿಗಳ ಚಟುವಟಿಕೆಗೆ ಸಹಕಾರ ನೀಡಿದರು.

ಗಣಿತದ ಮೂಲಭೂತ ಪರಿಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು
ಪ್ರಾಯೋಗಿಕವಾದ ಚಟುವಟಿಕೆಯ ಆಧಾರಿತ ಕಲಿಕೆಗೆ ಆದ್ಯತೆ ನೀಡಲಾಯಿತು. ಮಕ್ಕಳಲ್ಲಿ ಅನುಭವಾತ್ಮಕ ಕಲಿಕೆಯನ್ನು ಉಂಟುಮಾಡಲಾಯಿತು. ಮಾರುಕಟ್ಟೆಯ ವ್ಯಾಪಾರ ಹೇಗೆ ನಡೆಯುತ್ತದೆ, ವ್ಯಾಪಾರ ವಹಿವಾಟು ಪಠ್ಯಕ್ಕೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ಪರಿಚಯಿಸುವ ಸಲುವಾಗಿ ಶಾಲೆಯಲ್ಲಿ ಇಂದು ಮೆಟ್ರಿಕ್ ಮೇಳ ಸಂತೆಯನ್ನು
ಆಯೋಜನೆ ಮಾಡಲಾಯಿತು..