ಇಸ್ಲಾಮಿನ ಆದರ್ಶ ತತ್ವವನ್ನು ಅನುಸರಿಸಿ ಜೀವಿಸಿದರೆ ಸನ್ಮಾರ್ಗ ಪ್ರಾಪ್ತಿಸಲು ಸಾಧ್ಯ:ಸಯ್ಯಿದ್ ಕೂರತ್ ತಂಙಳ್
ಪೈಂಬೆಚಾಲು ಹಯಾತುಲ್ ಇಸ್ಲಾಂ ಹಯರ್ ಸೆಕೆಂಡರಿ ಮದರಸ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಂಡ್ ಅಜ್ಮೀರ್ ನೇರ್ಚೆ 9ನೇ ವಾರ್ಷಿಕೋತ್ಸವ ಮತ್ತು ತ್ರಿದಿನ ಮಹ್ಫಿಲೇ ನಸೀಹ ಕಾರ್ಯಕ್ರಮ ಜ.21 ರಂದು ಪೈಂಬೆಚ್ಚಾಲು ಮಸೀದಿ ವಠಾರದಲ್ಲಿ ಸಮಾಪನಗೊಂಡಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದುವಾ: ನೇತೃತ್ವವನ್ನು ನೀಡಿದ ದ ಕ ಜಿಲ್ಲಾ ಸಯುಕ್ತ ಖಾಝಿ ಸಯ್ಯಿದ್ ಕೂರತ್ ತಂಙಳ್ ಸಾಮೂಹಿಕ ಪ್ರಾರ್ಥನೆ ನಡೆಸಿ ಸಂದೇಶ ಭಾಷಣವನ್ನು ಮಾಡಿದ ಅವರು ಪರಿಶುದ್ಧವಾದ ಇಸ್ಲಾಮಿನ ಆದರ್ಶ ತತ್ವವನ್ನು ಅನುಸರಿಸಿ ಜೀವನ ನಡೆಸಿದರೆ ಸನ್ಮಾರ್ಗ ಪ್ರಾಪ್ತಿಸಲು ಸಾಧ್ಯ ಎಂದು ಹೇಳಿದರು.ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಸಮಾಜದಲ್ಲಿ ಸೌಹಾರ್ದತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಸರ್ವಶಕ್ತನಾದ ಅಲ್ಲಾಹನ ಭಯದಿಂದ ಜೀವಿಸಿದರೆ ಯಾವುದೇ ಕಠಿಣ ಸವಾಲುಗಳನ್ನು ಜೀವನದಲ್ಲಿ ಎದುರಿಸುವ ಶಕ್ತಿ ನಮಗಿರುತ್ತದೆ ಎಂದು ಹೇಳಿದರು.
ಮುಖ್ಯ ಪ್ರಭಾಷಣವನ್ನು ಮಾಡಿದ ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಅಜ್ಮೀರ್ ಖಾಜಾ ತಂಙಳ್ ರವರ ಜೀವನ ಚರಿತ್ರೆಯ ಕುರಿತ ಸಂದೇಶವನ್ನು ನೀಡಿದರು.
ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ ತಂಙಳ್ ಮುತ್ತನೂರು ತ್ರಿದಿನ ಕಾರ್ಯಕ್ರಮದ ಸಮಾಪನ ಪ್ರಾರ್ಥನೆಯನ್ನು ನಡೆಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಯ್ಯದ್ ಜಿಫ್ರೀ ತಂಙಳ್ ಕುಂಭಕೋಡು,ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್,ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಹಾಜಿ ಮುಸ್ತಫಾ ಜನತಾ,ಎಸ್ ಸಂಶುದ್ದೀನ್ ಅರಂಬೂರು,ಹಾಜಿ ಆದಂ ಕಮ್ಮಾಡಿ, ವಕೀಲರುಗಳಾದ ಅಬೂಬಕ್ಕರ್ ಅಡ್ಕಾರ್,ಮೂಸಾ ಕುಂಞಿ ಪೈಂಬಚ್ಚಾಲು ಇಸ್ಮಾಯಿಲ್ ಸಅದಿ ಕುಂಭಕೋಡು,ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಲತೀಫ್ ಸಅದಿ, ಅಬ್ದುಲ್ ರಹಿಮಾನ್ ಮೊಗರ್ಪಣೆ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಖತೀಬರಾದ ನಾಸಿರ್ ಸುಖೈಫಿ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಸ್ವಾಗತಿಸಿ ಫಾರೂಕ್ ಮದನಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಿತು. ಸಮಾರಂಭದಲ್ಲಿ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.