ಸಮಸ್ಯೆ ಕುರಿತ ದೂರವಾಣಿ ಕರೆಗೆ ಸ್ಪಂದಿಸಿದ ಸುಳ್ಯ ಮೆಸ್ಕಾಂ ಅಧಿಕಾರಿ ಹರೀಶ್ ನಾಯ್ಕ್

0

ಜಯನಗರದಲ್ಲಿ ವಿದ್ಯುತ್ ಕಂಬಕ್ಕೆ ತಾಗಿಕೊಂಡಿದ್ದ ಮರದ ರೆಂಬೆಗಳ ತೆರವು

ಜಯನಗರ ಅಂಗನವಾಡಿ ಕೇಂದ್ರದ ಬಳಿ ಮರವೊಂದರ ರೆಂಬೆಗಳು ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಸಂಪೂರ್ಣವಾಗಿ ತಾಗಿಕೊಂಡಿದ್ದು ಅಪಾಯದ ಮುನ್ಸೂಚನೆ ನೀಡುತ್ತಿತ್ತು.
ಈ ಮಾಹಿತಿಯನ್ನು ಸ್ಥಳೀಯ ನಿವಾಸಿಗಳು ಜನವರಿ ೨೩ರಂದು ರಾತ್ರಿ ಮೆಸ್ಕಾಂ ಅಧಿಕಾರಿ ಎ ಇ ಇ ಹರೀಶ್ ನ್ಯಾಕ್ ರವರಿಗೆ ದೂರವಾಣಿ ಕರೆ ಮಾಲಕ ತಿಳಿಸಿದ್ದರು.


ಕೂಡಲೇ ಕರೆ ಸ್ವೀಕರಿಸಿದ ಹರೀಶ್ ರವರು ಉತ್ತಮ ಸ್ಪಂದನೆ ನೀಡಿ ನಾಳೆ ಬೆಳಿಗ್ಗೆ ನೇ ತೆರುವು ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು.


ಅದರಂತೆ ಇಂದು ಬೆಳಿಗ್ಗೆ ಕಚೇರಿಯಿಂದ ತಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಅಪಾಯದಲ್ಲಿದ್ದ ರೆಂಬೆಗಳ ತೆರವು ಕಾರ್ಯ ಮತ್ತು ಸ್ಥಳೀಯ ಪರಿಸರದಲ್ಲಿ ಅದೇ ರೀತಿ ಇದ್ದ ಇನ್ನೂ ಹಲವಾರು ಕಂಬಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೂಡ ಮಾಡಿದರು.
ಇವರ ಈ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.