ನಿವೃತ್ತ ಅರಣ್ಯ ರಕ್ಷಕ ಕೊರಗೋಜಿ ರಾವ್ ನಿಧನ

0

ಸುಳ್ಯ ನಿವಾಸಿ, ನಿವೃತ್ತ ಅರಣ್ಯ ರಕ್ಷಕ ಕೊರಗೋಜಿ ರಾವ್ ಅಲ್ಪ ಕಾಲದ ಅಸೌಖ್ಯದಿಂದ ಜ.17 ರಂದು ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರಾಗಿ, ಅರಣ್ಯ ರಕ್ಷಕರಾಗಿ 45 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.