ಸುಳ್ಯ ನ್ಯಾಯಾಲಯದಲ್ಲಿ ೭೫ನೇ ವರ್ಷದ ಗಣರಾಜ್ಯೋತ್ಸವವನ್ನು ಇಂದು ಆಚರಿಸಲಾಯಿತು. ಸುಳ್ಯ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಧೀಶ ಮೋಹನ್ ಬಾಬುರವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ಭಾಷಣವನ್ನು ಮಾಡಿದರು.
ಸಿವಿಲ್ ನ್ಯಾಯಾಧೀಶೆ ಕು.ಅರ್ಪಿತಾ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ಕೆ.ನಾರಾಯಣ, ಪ್ರಧಾನ ಕಾರ್ಯದರ್ಶಿ ವಿನಯ ಮುಳುಗಾಡು, ಸಹಾಯಕ ಸರಕಾರಿ ಅಭಿಯೋಜಕ ರಮೇಶ ಹಾಗೂ ಹಿರಿಯ ಕಿರಿಯ ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.