ಆಲೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ- ಪ್ರತಿಭಾ ದಿನೋತ್ಸವ

0

ರಂಗಮಂದಿರದ ಕೊಡುಗೆ ನೀಡಿದ ಡಾ.ಜಿ.ಶಿವಾನಂದ ಗೌಡ ಗಬ್ಬಲ್ಕಜೆ ಯವರಿಗೆ ಸನ್ಮಾನ

ಆಲೆಟ್ಟಿ ದ.ಕ ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ಕೋಡು ಶಾಲೆಯಲ್ಲಿ 75 ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಹಾಗೂ ಶಾಲಾ ಪ್ರತಿಭಾ ದಿನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸುದೇವ ಗೌಡ ಕುಡೆಕಲ್ಲು ದೀಪ ಪ್ರಜ್ವಲಿಸಿದರು.
ಮುಖ್ಯ ಅಭ್ಯಾಗತರಾಗಿ
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಆಗಮಿಸಿ ದಾನಿಗಳನ್ನು ಸನ್ಮಾನಿಸಿದರು.

ಅತಿಥಿಗಳಾಗಿ ನಿವೃತ್ತ
ಪಶು ವೈದ್ಯಾಧಿಕಾರಿ ಡಾ.ಜಿ.ಶಿವಾನಂದ ಗಬ್ಬಲ್ಕಜೆ, ಪಂ.ಸದಸ್ಯರಾದ ಚಂದ್ರಕಾಂತ ನಾರ್ಕೋಡು, ಸತ್ಯಪ್ರಸಾದ್ ಗಬ್ಬಲ್ಕಜೆ, ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ, ನಿವೃತ್ತ ಶಿಕ್ಷಕ ವೇಣುಗೋಪಾಲ ಕೆ, ಸುಳ್ಯ ರೋಟರಿ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಹುಕ್ರಪ್ಪ ಪೂಜಾರಿ ಕುದ್ಕುಳಿ, ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳಗ್ಗೆ ಗಣರಾಜ್ಯೋತ್ಸವ ದ ಅಂಗವಾಗಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಹುಕ್ರಪ್ಪ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.
ಅತಿಥಿಗಳನ್ನು ವಿದ್ಯಾರ್ಥಿಗಳ ಬ್ಯಾಂಡ್ ವಾದನದೊಂದಿಗೆ ಸ್ವಾಗತ ಕೋರಲಾಯಿತು.


ಈ ಸಂದರ್ಭದಲ್ಲಿ
ಶಾಲೆಗೆ ಸುಂದರವಾದ ರಂಗ ಮಂದಿರವನ್ನು ‌ದಿ.ಗಬ್ಬಲ್ಕಜೆ ಶಿವಪ್ಪ ಗೌಡ ಮಾಸ್ತರ್ ರವರ ಸವಿ ನೆನಪಿಗಾಗಿ ಕೊಡುಗೆ ನೀಡಿದ ಅವರ ಪುತ್ರ ಡಾ.ಜಿ.ಶಿವಾನಂದ ಗಬ್ಬಲ್ಕಜೆ ಯವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೊಡುಗೈ ದಾನಿ
ಗುತ್ತಿಗೆದಾರ ತೀರ್ಥಕುಮಾರ್ ಕುಂಚಡ್ಕ ರವರನ್ನು ಸನ್ಮಾನಿಸಲಾಯಿತು.

ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ
ದಿ.ವೆಂಕಪ್ಪ ಗೌಡ ನಾರ್ಕೋಡುರವರ ಸ್ಮರಣಾರ್ಥ ಶಾಲೆಗೆ ಕೊಡುಗೆಯಾಗಿ ಕಂಪ್ಯೂಟರ್ ನ್ನು ಪುತ್ರರಾದ ಗಿರೀಶ್ ನಾರ್ಕೋಡು ಮತ್ತು ಚಂದ್ರಕಾಂತ ನಾರ್ಕೋಡು ರವರು ಹಸ್ತಾಂತರಿಸಿದರು.

ಜ.17 ರಂದು ವಾರ್ಷಿಕೋತ್ಸವದ ಪ್ರಯುಕ್ತ
ವಿದ್ಯಾರ್ಥಿಗಳಿಗೆ ಹಾಗೂ ಹಳೆವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಮ್ಮಿಕೊಂಡ ಕ್ರೀಡೋತ್ಸವದ ವಿಜೇತರಿಗೆ ‌ಬಹುಮಾನ ವಿತರಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆನಂದ ಅಡ್ಪಂಗಾಯ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುನಂದ ಪ್ರಾಸ್ತಾವಿಕ ಮಾತಿನೊಂದಿಗೆ ವರದಿ ವಾಚಿಸಿದರು.
ಸಹ ಶಿಕ್ಷಕ ಸುನಿಲ್ ವಂದಿಸಿದರು. ವಿದ್ಯಾರ್ಥಿಗಳಾದ ಕು.ಆಶಿಕಾ, ಮುಬಶಿರ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರು ಸಹಕರಿಸಿದರು. ಎಸ್.ಡಿ.ಎಂ.ಸಿ.ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು.