ಮೊಗರ್ಪಣೆ ಜುಮಾ ಮಸ್ಜಿದ್ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ

0

ಮೊಗರ್ಪಣೆ ಜುಮಾ ಮಸ್ಜಿದ್ ಎಚ್ ಐ ಜೆ ಕಮಿಟಿ ವತಿಯಿಂದ 75 ನೇ ಗಣರಾಜ್ಯೊತ್ಸವ ಆಚರಿಸಲಾಯಿತು.ಮೊಗರ್ಪಣೆ ಎಚ್ ಐ ಜೆ ಕಮಿಟಿ ಅದ್ಯಕ್ಷ ಹಾಜಿ ಇಬ್ರಾಹಿಂ ಸಿಫುಡ್ ಧ್ವಜಾರೋಹಣ ನೆರವೇರಿಸಿದರು.
ಮಸೀದಿ ಮುದರ್ರಿಸ್ ಹಾಫೀಲ್ ಸೌಖತ್ ಅಲಿ ಸಖಾಫಿ ದುವಾಃ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಮಿಟಿ ಉಪಾಧ್ಯಕ್ಷ ಸಿ ಎಂ ಉಸ್ಮಾನ್,ಕೋಶಧಿಕಾರಿ ಮಹಮ್ಮದ್ ಆರ್ದಶ,ಕಾರ್ಯದರ್ಶಿ ಅಬ್ದುಲ್ ರಹಿಮಾನ್,ಸದಸ್ಯರಾದ ಮುನೀರ್ ಸಿಲೊನ್,ನ ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್,ಮುಅಲ್ಲಿಮ್ಮರಾದ ಶಫೀಕ್ ಸಖಾಫಿ,ಮೂಸಾ ಮುಸ್ಲಿಯಾರ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಶೀರ್ ಕೆ ಎಂ,ಮಾಜಿ ಅದ್ಯಕ್ಷ ಮೊಹಿದ್ದೀನ್, ಸ್ಥಳೀಯ ಮುಖಂಡರಾದ ಲತೀಫ್ ಸಿಲಿಕಾನ್, ಅಲಿ, ದರ್ಸ್ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.