ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

0

ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು ಜ.26ರಂದು ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಡಾ ಉಜ್ವಲ್ ಯು. ಜೆ. ಭಾಗವಹಿಸಿ ಧ್ವಜಾರಣವನ್ನು ನೆರವೇರಿಸಿ, ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ ,ಎಂ‌‌.ಬಿ.ಎ. ವಿಭಾಗದ ಮುಖ್ಯಸ್ಥ ಕೃಷ್ಣಾನಂದ ಎ., ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಚಂದ್ರಶೇಖರ್ ಎ. , ದೈಹಿಕ ಶಿಕ್ಷಕ ಭಾಸ್ಕರ್ ಬೆಳೆಗದ್ದೆ, ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಪ್ರೊ. ಡಾ . ಸ್ಮಿತಾ ಉಜ್ವಲ್ , ಮುಖ್ಯ ಗ್ರಂಥ ಪಾಲಕ ಸೀತಾರಾಮ ಪಿ ಬಿ, ಎಂ.ಬಿ.ಎ. ವಿಭಾಗದ ಉಪನ್ಯಾಸಕ ಮನೋಹರ ,ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ. ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.