ಪಂಜ: ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಬೆಳ್ಳಿ ಹಬ್ಬ ಸಂಭ್ರಮ ಉದ್ಘಾಟನೆ

0

ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗ ಇದರ ಬೆಳ್ಳಿ ಹಬ್ಬ “ಬೊಳ್ಳಿ ಪಜ್ಜೆ” ಕಾರ್ಯಕ್ರಮ ಇಂದು ಪಲ್ಲೋಡಿಯಲ್ಲಿ ಉದ್ಘಾಟನೆ ಗೊಂಡಿತು.

ಆ ಪ್ರಯುಕ್ತ ಪೂರ್ವಾಹ್ನ ಸಭಾ ಕಾರ್ಯಕ್ರಮ, ಪದಗ್ರಹಣ ಸಮಾರಂಭ ಹಾಗೂ ಶ್ರೀ ಉಳ್ಳಾಕುಲು ಕಲಾ ರಂಗದ ನೂತನ ಕಟ್ಟಡದ ಗುದ್ದಲಿ ಪೂಜೆ , ಕ್ರೀಡಾ ಸ್ಪರ್ಧೆ ಉದ್ಘಾಟನೆ ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ನೂತನ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗವು ಸಾಮಾಜಿಕ, ಧಾರ್ಮಿಕ,ಸಾಂಸ್ಕೃತಿಕವನ್ನು ನಿರಂತರವಾಗಿ ನೀಡುತ್ತಿರುವ ಶಿಸ್ತು ಬದ್ಧ ಸಂಘಟನೆಯಾಗಿ ಬೆಳೆದಿದೆ. ಹುಟ್ಟಿನಿಂದ ಸಾಯುವ ತನಕ ಸಹಕಾರ ನೀಡಿ ಜೊತೆಗಿರುವ ಸಂಘಟನೆ ಶ್ರೀ ಉಳ್ಳಾಕುಲು ಕಲಾರಂಗ. ಮುಂದಿನ ವರುಷ ಕಲಾರಂಗದ ನೂತನ ಕಟ್ಟಡ ಲೋಕಾರ್ಪಣೆ ಗೊಳ್ಳಲಿ, ಅದಕ್ಕೆ ನನ್ನ ಕಡೆಯಿಂದ ಸಹಕಾರ ನೀಡುತ್ತೇನೆ.”ಎಂದು ಹೇಳಿದರು.

ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು .

ಅತಿಥಿಯಾಗಿದ್ದ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ “ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗ 70 ಪುರುಷ , ಮಹಿಳಾ ಸದಸ್ಯರನ್ನು ಹೊಂದಿದೆ.ಇದು ಸುಳ್ಯ ತಾಲೂಕಿನಲ್ಲಿಯೇ ಇತಿಹಾಸವಾಗಿದೆ. ಕಲಾರಂಗದ ನೂತನ ಕಟ್ಟಡಕ್ಕೆ ಯುವಜನ ಸಂಯುಕ್ತ ಮಂಡಳಿ ಯಿಂದ ಸೌಲಭ್ಯ ಒದಗಿಸುತ್ತೇವೆ”. ಎಂದು ಹೇಳಿದರು.


ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಕ್ರೀಡಾಂಗಣವನ್ನು ಉದ್ಘಾಟಿಸಿ ಶುಭಹಾರೈಸಿದರು
.

ಮುಖ್ಯ ಅತಿಥಿ ಕಲಾ ರಂಗದ ಸ್ಥಾಪಕಾಧ್ಯಕ್ಷ ಲೋಕೇಶ್ ಬರೆಮೇಲು ಹಾಗೂ ಕಲಾರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಪ್ರದೀಪ್ ಪಲ್ಲೋಡಿ, ಬೆಳ್ಳಿ ಹಬ್ಬ ಸಮಿತಿ ಮುಖ್ಯ ಸಂಚಾಲಕ ನಾರಾಯಣ ಗೌಡ ಪಲ್ಲೋಡಿ, ನೂತನ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ, ಕಾರ್ಯದರ್ಶಿ ಸತೀಶ್ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಶಾಸಕಿ ಭಾಗೀರಥಿ ಮುರುಳ್ಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಹಗ್ಗಜಗ್ಗಾಟ ತಂಡದಲ್ಲಿ ಬೆರೆತು ಹಗ್ಗ ಎಳೆದು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಅವಿನಾಶ್ ಪಲ್ಲೋಡಿ ಸ್ವಾಗತಿಸಿದರು. ನೇಮಿರಾಜ ಪಲ್ಲೋಡಿ ಪ್ರಾಸ್ತಾವಿಕ ಮಾತನಾಡಿದರು.


ಶ್ರೀಮತಿ ಧನ್ಯತಾ ಬಾಲಕೃಷ್ಣ ಪಲ್ಲೋಡಿ ಮತ್ತು ಪ್ರಕಾಶ್ ಜಾಕೆ ನಿರೂಪಿಸಿದರು. ಪ್ರದೀಪ್ ಪಲ್ಲೋಡಿ ವಂದಿಸಿದರು. ಬಳಿಕ ಕ್ರೀಡಾ ಸ್ಪರ್ಧೆಗಳು ಆರಂಭ ಗೊಂಡಿತು.

ಸಂಜೆ ಸಮಾರೋಪ:
ಸಂಜೆ ಗಂಟೆ 7 ರಿಂದ ಸನ್ಮಾನ, ಸಮಾರೋಪ ಸಮಾರಂಭ, ಸಮರ್ಪಣಾ ನಿಧಿ ವಿತರಣೆ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಕಲಾ ರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ ನಿವೃತ್ತ ತಾಂತ್ರಿಕ ಅಧಿಕಾರಿ ನೋಂಡಪ್ಪ ನಾಯ್ಕ ಚಾಳೆಗುಳಿ ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಗೌಡ ಬೇರ್ಯ ಸನ್ಮಾನಿಸಲಿದ್ದಾರೆ.

ಸಮಾಜ ಸೇವೆ ಬಿ ಯಂ ಆನಂದ ಗೌಡ ಕಂಬಳ, ಸಾಂಸ್ಕೃತಿಕ ಪ್ರಶಾಂತ್ ರೈ ಪಲ್ಲೋಡಿ, ವಿದೂಷಿ ಪೃಥ್ವಿ ಶೆಟ್ಟಿ ಪಲ್ಲೋಡಿ, ಕ್ರೀಡೆ ಪ್ರಜ್ವಲ್ ಶೆಟ್ಟಿ ಪಲ್ಲೋಡಿ, ಅವನಿ ಪಳಂಗಾಯ, ಚಿನ್ಮಯಿ ಆಳ್ವ, ಯೋಗ ಅನ್ವಿತ್ ಶೆಟ್ಟಿ ಪಲ್ಲೋಡಿ, ಚಿತ್ರಕಲೆ ಜಸ್ವಿತ್ ತೋಟ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್, ಯುವ ತೇಜಸ್ ಟ್ರಸ್ಟ್ ರವರು ಸನ್ಮಾನ ಸ್ವೀಕರಿಸಲಿದ್ದಾರೆ.

ರಾತ್ರಿ ಗಂಟೆ 9 ರಿಂದ ವಿಟ್ಲ ಮೈರ ಕೇಪು ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದೆರ್ ಅಭಿನಯಿಸುವ ಅದ್ದೂರಿ ಭಕ್ತಿ ಪ್ರಧಾನ ತುಳು ನಾಟಕ ‘ಕಲ್ಜಿಗದ ಕಾಳಿ ಮಂತ್ರ ದೇವತೆ’ ಪ್ರದರ್ಶನ ಗೊಳ್ಳಲಿದೆ.