ಜೇಸಿಐ ಪಂಜ ಪಂಚಶ್ರೀ*ಮತ್ತು ಮುಡೂರು ಇನ್ಫೋಟೆಕ್ ಪಂಜ ಇದರ ಆಶ್ರಯದಲ್ಲಿ
ಜಾ.27 ರಂದು ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ “ಪ್ರೇರಣಾ” ಶೈಕ್ಷಣಿಕ ಸರಣಿ ತರಬೇತಿ
ಉದ್ಘಾಟನೆ ಗೊಂಡಿತು.
ವಲಯ 15ರ ತರಬೇತಿ ನಿರ್ದೇಶಕರಾದ ಜೇಸಿ ಹೇಮಲತಾ ಬಾಕಿಲ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಜೀವನ್ ಮೆಲ್ಕಜೆ ವಹಿಸಿದ್ದರು.
ವಲಯ ತರಬೇತುದಾರರಾದ ಜೇಸಿ ಸವಿತಾರ ಮುಡೂರು ಮತ್ತು ಜೇಸಿ ಸೋಮಶೇಖರ ನೇರಳ , ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ರೂಪಲತ ಕೆ. ಆರ್, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಲೋಕೇಶ್ ಅಕ್ರಿಕಟ್ಟೆ, ಘಟಕದ ಕಾರ್ಯದರ್ಶಿ ಜೇಸಿ ಜೀವನ್ ಶೆಟ್ಟಿಗದ್ದೆ, ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಪ್ರವೀಣ್ ಕುಂಜತ್ತಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
. ಕಾರ್ಯಕ್ರಮದಲ್ಲಿ ಜೇಸಿ ವಾಚಣ್ಣ ಕೆರೆಮೂಲೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಜೇಸಿ ಶ್ರೇಯಸ್ ತುಪ್ಪದಮನೆ ಜೇಸಿವಾಣಿ ನುಡಿದರು, ಅತಿಥಿಗಳ, ತರಬೇತುದಾರರಾದ ಪರಿಚಯವನ್ನು ಜೇಸಿ ಮದನ್ ಕೊಲ್ಯ, ಜೇಸಿ ಹರ್ಷಿತ್ ಪಂಡಿ, ಪುನೀತ್ ಎಣ್ಣೆಮಜಲು ನೆರವೇರಿಸಿದರು, ಜೇಸಿ ಜೀವನ್ ಶೆಟ್ಟಿಗದ್ದೆ ವಂದಿಸಿದರು.
ನಂತರ ವಲಯ ತರಬೇತುದಾರರಾದ ಜೇಸಿ ಸವಿತಾರ ಮುಡೂರು ಮತ್ತು ಜೇಸಿ ಸೋಮಶೇಖರ ನೇರಳ ಇವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ ಘಟಕದ ಪೂರ್ವಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.