ಕೊಲ್ಲಮೊಗ್ರು ಗ್ರಾಮದ ಮಿತ್ತೋಡಿಯಲ್ಲಿ ಕಿರು ಸೇತುವೆಯ ಇಕ್ಕೆಲಗಳಲ್ಲಿ ಮಾಡಬೇಕಿದ್ದ ತಡೆಗೋಡೆ ಕಾಮಗಾರಿ ಅರ್ಧದಲ್ಲಿ ನಿಂತಿರುವ ಕಾಮಗಾರಿಯನ್ನು ಜ.29 ರಂದು ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಣೆ ಮಾಡಿದರು.
ಬಳಿಕ ಶಾಸಕಿಯವರು ಅಧಿಕಾರಿಗಳಿಗೆ ಪೋನ್ ಮುಖಾಂತರ ಮಾತನಾಡಿ ಕಾಮಗಾರಿ ಪೂರ್ಣ ಗೊಳಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭ ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಚಾಂತಾಳ, ಉಪಾಧ್ಯಕ್ಷ ಅಶ್ವಥ್ ಯಲದಾಳು, ಸದಸ್ಯರಾದ ಪುಷ್ಪರಾಜ್ ಪಡ್ಪು, ಮಾದವ ಚಾಂತಾಳ, ಸ್ಥಳೀಯರಾದ ಉದಯ ಶಿವಾಲ ಮತ್ತಿತರರು ಉಪಸ್ಥಿತರಿದ್ದರು.