ಎನ್ ಎಸ್ ಯು ಐ ಜಿಲ್ಲಾ ಸಮಿತಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

0

ಉಪಾಧ್ಯಕ್ಷರಾಗಿ: ಕೀರ್ತನ್ ಗೌಡ ಕೊಡಪಾಲ

ಪ್ರ. ಕಾರ್ಯದರ್ಶಿಯಾಗಿ: ಆಶಿಕ್ ಆರಂತೋಡು, ಉಬೈಸ್ ಗೂನಡ್ಕ

ಕಾರ್ಯದರ್ಶಿಯಾಗಿ: ಪವನ್ ಅಂಬೆಕಲ್ಲು

ಜಿಲ್ಲಾ ಎನ್ ಎಸ್ ಯು ಐ ಸಮಿತಿಯನ್ನು ರಾಜ್ಯ ಎನ್ ಎಸ್ ಯು ಐ ಸಮಿತಿಯು ಬಿಡುಗಡೆ ಮಾಡಿದ್ದು ಜಿಲ್ಲಾ ಉಪಾಧ್ಯಕ್ಷರಾಗಿ ಕೀರ್ತನ್ ಗೌಡ ಕೊಡಪಾಲ ರವನ್ನು ಪ್ರಧಾನ ಕಾರ್ಯದರ್ಶಿಗಳಾಗಿ ಆಶಿಕ್ ಆರಂತೋಡು, ಉಬೈಸ್ ಗೂನಡ್ಕ ಕಾರ್ಯದರ್ಶಿಯಾಗಿ ಪವನ್ ಅಂಬೆಕಲ್ಲು ರವರನ್ನು ಬಿಡುಗಡೆ ಮಾಡಿದೆ.

ಕೀರ್ತನ್ ಗೌಡ ಕೊಡಪಾಲ ರವರು ಈ ಹಿಂದೆ ಎನ್ ಯು ಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಿದ ಅನುಭವದಲ್ಲಿ ಜಿಲ್ಲಾ ಎನ್ ಯು ಐ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಆಶಿಕ್ ಆರಂತೋಡು ರವರು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ಉಬೈಸ್ ಗೂನಡ್ಕ ರವರು ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಕಾರ್ಯದರ್ಶಿಯಗಿ ಕೆಲಸ ಮಾಡಿರುತ್ತಾರೆ

ಪವನ್ ಅಂಬೆಕಲ್ಲು ರವರು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.