ನಿಂತಿಕಲ್ಲು ಎಣ್ಮೂರಿನ ಕೆನರಾ ಬ್ಯಾಂಕ್ ಮುಂಬಾಗದಲ್ಲಿರುವ ಸ್ಟಾರ್ ಡಿಜಿಟಲ್ ಸೇವಾ ಕೇಂದ್ರದಲ್ಲಿ ಅಧಿಕೃತ ಈ ಸ್ಟಾಂಪಿಂಗ್ ಸೌಲಭ್ಯ ಆರಂಭಗೊಂಡಿರುತ್ತದೆ. ಈ ಗವರ್ನೆನ್ಸ್ ಇಂಡಿಯಾ ಪ್ರೈ ಲಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಈ ಸಂಸ್ಥೆಯಲ್ಲಿ ಎಲ್ಲಾ ಮುಖಬೆಲೆಯ ಈ ಸ್ಟಾಂಪ್ ಪೇಪರ್ ಗಳು (ಠಸೆ ಪೇಪರ್) ದೊರೆಯುತ್ತಿದ್ದು ಗ್ರಾಹಕರು ಸರಕಾರಿ ರಜಾದಿನಗಳಲ್ಲಿಯೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರದ ಎಲ್ಲಾ G2C ಸೇವೆಗಳು, ಬ್ಯಾಕಿಂಗ್ ಸೇವೆಗಳು, ಟ್ರಾವೆಲ್ ಸೇವೆಗಳು ಸಹಿತ ಎಲ್ಲಾ ಆನ್ಲೈನ್ ಸೇವೆಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿರುತ್ತಾರೆ