ಇಂದು ಕುಲ್ಕುಂದದ ದಾಸನಿವಾಸದಲ್ಲಿ ಸಂಗೀತೋತ್ಸವ ಹಾಗೂ ಯಕ್ಷಗಾನೋತ್ಸವ

0

ದಾಸ ನಿವಾಸ ಕಲಾ ವೇದಿಕೆ ಮತ್ತು ಸ್ಥಳೀಯ ಕಲಾಸಕ್ತರ ಸಹಯೋಗದಲ್ಲಿ, ಶ್ರೀ ಸುಬ್ರಹ್ಮಣ್ಯ ಮಠದ
ವಿದ್ಯಾಪ್ರಸನ್ನತೀರ್ಥ ಸ್ವಾಮಿಗಳು ಹಾಗೂ ಶ್ರೀ ಎಡನೀರು ಮಠ ಸಚ್ಚಿದಾನಂದ ಭಾರತೀತೀರ್ಥ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ
ಫೆ5 ರಂದು ದಾಸನಿವಾಸ ಕುಲ್ಕುಂದದಲ್ಲಿ ಸಂಗೀತೋತ್ಸವ ಹಾಗೂ ಯಕ್ಷಗಾನೋತ್ಸವ ನಡೆಯಲಿದೆ.
ಸಂಜೆ 4.30 ರಿಂದ ಕಲೈಮಾಮಣಿ ವಿದ್ವಾನ್ ಶಂಕರನ್ ನಂಬೂದರಿ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ.

ರಾತ್ರಿ 7.45 ಕ್ಕೆ ಅತಿಥಿ ಸತ್ಕಾರ ನಡೆಯಲಿದ್ದು ಬಳಿಕ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು ಶಿರಿಯಾರ ಅವರಿಂದ ಯಕ್ಷಗಾನ ಬಯಲಾಟ
ಚಂದ್ರಾವಳಿ ವಿಲಾಸ ಮಾಗಧವಧೆ ನಡೆಯಲಿದೆ.