ಅರಣ್ಯ ಸಚಿವ ಈಶ್ವರ ಖಂಡ್ರೆ ಸುಬ್ರಹ್ಮಣ್ಯ, ಕೊಲ್ಲಮೊಗ್ರಕ್ಕೆ ಭೇಟಿ

0

ಕಲ್ಮಕಾರು, ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ, ಬಾಳುಗೋಡು ನಾಗರಿಕರಿಗೆ ಹಕ್ಕುಪತ್ರ ನೀಡಲು ಬ್ಲಾಕ್ ಕಾಂಗ್ರೆಸ್ ಮನವಿ

ಸುಳ್ಯ ತಾಲೂಕು ಕಲ್ಮಕಾರು, ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ ಗ್ರಾಮಗಳಲ್ಲಿ ತಲತಲಾಂತರಗಳಿಂದ ನೆಲೆಸಿರುವ ನೂರಾರು ಮನೆಗಳಿಗೆ ತಾವು ಕುಳಿತ ಸ್ಥಳದ ಹಕ್ಕುಪತ್ರ ಏನೂ ಪ್ರಯೋಜನವಾಗಿರುವುದಿಲ್ಲ. ಅದನ್ನು ಸರಿಪಡಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಸಲ್ಲಿಸಲಾಯಿತು.

ಕಲ್ಮಕಾರು ಗ್ರಾಮದ 107 ಸರ್ವೆ ನಂಬರ್ ಒಂದರಲ್ಲೇ 70ಕ್ಕೂ ಅಧಿಕ ಮನೆಗಳಿವೆ. ಕೊಲ್ಲಮೊಗ್ರ ಗ್ರಾಮದ ಸರ್ವೆ ನಂಬರ್ 186ರಲ್ಲಿ ಹರಿಹರ ಪಲ್ಲತ್ತಡ್ಕ ಸರ್ವೆ ನಂಬರ್ 58ರಲ್ಲಿ ಬಾಳುಗೋಡು, ಕೊತ್ನಡ್ಕ, ಬೆಟ್ಟುಮಕ್ಕಿ, ಉಪ್ಪುಕಳ ಆಗಿ ನೂರಾರು ಮನೆಗಳು ಅಡಿ ಸ್ಥಳದ ಹಕ್ಕುಪತ್ರವಿಲ್ಲದೆ 9/11 ಆಗುವುದಿಲ್ಲ. ಅಲ್ಲದೇ ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಸಂಪರ್ಕ ತೀರಾ ನಾದುರಸ್ತಿಯಲ್ಲಿದೆ. ಇಲ್ಲಿಯ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಬೇಕು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೊಡಗಿನಿಂದ ಗುಳಿಬೀಡು ಮಾರ್ಗದ ಮೂಲಕ ಅಂತರ್‌ಜಿಲ್ಲಾ ಸರ್ವಋತು ರಸ್ತೆಯು ತೀರಾ ಅಗತ್ಯತೆಯಿದ್ದು, ಸರಕಾರದ ಮಟ್ಟದಲ್ಲಿ ಮಂಜೂರು ಮಾಡಬೇಕು. ಆದ್ದರಿಂದ ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂಬ ಮನವಿಯನ್ನು ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ್ ಮನವಿ ಮಾಡಿದರು. ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.