ಕುಂಭಕೋಡು: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ದಾಸ್ತಾನಿರಿಸಿದ್ದ ಅಡಿಕೆ ಮತ್ತು ರಬ್ಬರ್ ಬೆಂಕಿಗಾಹುತಿ

0

ಆಲೆಟ್ಟಿಯ ಕುಂಭಕೋಡು ಎಂಬಲ್ಲಿ ಅಬ್ದುಲ್ಲ ಎಂಬವರಿಗೆ ಸೇರಿದ ಮನೆಯಲ್ಲಿ ಆಕಸ್ಮಿಕವಾಗಿ ತಡ ರಾತ್ರಿ ಬೆಂಕಿ ತಗುಲಿ ದಾಸ್ತಾನಿರಿಸಿದ್ದ ಅಡಿಕೆ ಮತ್ತು ರಬ್ಬರ್ ಬೆಂಕಿಗಾಹುತಿಯಾಗಿ
ನಷ್ಟ ಉಂಟಾಗಿರುವ ಘಟನೆ ವರದಿಯಾಗಿದೆ.


ಅಬ್ದುಲ್ಲ ರವರಿಗೆ ಕುಂಭಕೋಡು ಎಂಬಲ್ಲಿ ಅಡಿಕೆ ಹಾಗೂ ರಬ್ಬರ್ ತೋಟವಿದ್ದು ಕೃಷಿಕರಾಗಿದ್ದಾರೆ.
ಪ್ರಸ್ತುತ ಅವರು
ಕೇರಳದ ಬಂದಡ್ಕದಲ್ಲಿ ವಾಸವಿರುವುದರಿಂದ ಆಗಾಗ ಬಂದು ತೋಟ ನೋಡಿಕೊಂಡು ಹೋಗುತ್ತಿದ್ದರು. ಮನೆಯ ಪಕ್ಕದಲ್ಲಿ ರಬ್ಬರ್ ಸ್ಮೋಕ್ ಹೌಸ್ ಇದ್ದು ಅದರಿಂದ ಮನೆಗೆತಗುಲಿರಬಹುದೆಂದು ಅಂದಾಜಿಸಲಾಗಿದೆ.
ರಾತ್ರಿ ವೇಳೆಯಲ್ಲಿ ಬೆಂಕಿ ಹತ್ತಿಕೊಂಡಿದ್ದು ಅಕ್ಕ ಪಕ್ಕದ ಮನೆಯವರ‌ ಗಮನಕ್ಕೆ ಬರುವಷ್ಟರಲ್ಲಿ ಅಡಿಕೆ ರಬ್ಬರ್ ಬೆಂಕಿಗಾಹುತಿಯಾಗಿದೆ. ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿರುತ್ತಾರೆ ಎಂದು ತಿಳಿದು ಬಂದಿದೆ. ಎಷ್ಟು ಮೌಲ್ಯದ ಕೃಷಿ ಉತ್ಪನ್ನ ಉರಿದು ಹೋಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.