ಬಾಳಿಲ ಗ್ರಾಮ ಪಂಚಾಯತ್ ವಿಕಲ ಚೇತನರ ವಿಶೇಷ ಗ್ರಾಮಸಭೆ

0

ಬಾಳಿಲ ಗ್ರಾಮ ಪಂಚಾಯತ್ 2023-24 ನೇ ಸಾಲಿನ ವಿಕಲಚೇತನ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತ್‌ ಕಛೇರಿಯಲ್ಲಿ ಫೆ.09 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಎಂ.ಆರ್.ಡಬ್ಲ್ಯು ಚಂದ್ರಶೇಖರ್‌, ಕೆನರಾ ಬ್ಯಾಂಕ್‌ ನ ಬ್ಯಾಕ್‌ ಸಖಿಯಾದ ಸುಜಾತ, ಗ್ರಾ.ಪಂ ನ ಅಧ್ಯಕ್ಷರಾದ ಪಾವನ ಕೆ ಜೋಗಿಬೆಟ್ಟು , ಉಪಾಧ್ಯಕ್ಷರಾದ ರಮೇಶ್‌ ರೈ ಅಗಲ್ಪಾಡಿ, ಗ್ರಾ.ಪಂ ಸದಸ್ಯರಾದ ಜೆ ಹರ್ಷ, ಪಂ ಅ. ಅಧಿಕಾರಿ ಬಿ ಹೂವಪ್ಪ ಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಪದಾಧಿಕಾರಿಗಳು, ವಿಕಲಚೇತನರು ಹಾಗೂ ಪೋಷಕರು ಭಾಗವಹಿಸಿದ್ದರು. ಸಂಜೀವನಿ ಸಂಘದ ಎಂ.ಬಿ.ಕೆ ಮಧುರಾ ಕೆ ಇವರು ಪ್ರಾರ್ಥಿಸಿ, ಗ್ರಂಥಾಲಯ ಮೇಲ್ವಿಚಾರಕರಾದ ಬಾಬು ಎಂ ಸ್ವಾಗತಿಸಿ . ಗ್ರಾ.ಪಂ ಸದಸ್ಯರಾದ ಜೆ ಹರ್ಷ ವಂದಿಸಿದರು. VRW ಕೃಷ್ಣಪ್ರಸಾದ್‌ ಕೆ ಇವರು ಕಾರ್ಯಕ್ರಮ ನಿರೂಪಿಸಿದರು.