ಸುಳ್ಯ : ಬೆಟ್ಟಂಪಾಡಿಯಲ್ಲಿ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿಪೂಜೆ

0

ಸುಳ್ಯ ನಗರದ ಬೆಟ್ಟಂಪಾಡಿ ಆಶ್ರಯ ಕಾಲೋನಿ ಪರಿಸರದಲ್ಲಿ ನಗರ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು.

ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ರವರು ಗುದ್ದಲಿಪೂಜೆ ನೆರವೇರಿಸಿದರು. ನಗರ ಪಂಚಾಯಿತಿನ 15 ಲಕ್ಷ ರೂ ಅನುದಾನದಲ್ಲಿ ಬೆಟ್ಟಂಪಾಡಿಯಲ್ಲಿ ಅಂಗನವಾಡಿ ಕಟ್ಟಡವು ನಿರ್ಮಾಣವಾಗಲಿದೆ.

ನಗರ ಪಂಚಾಯತ್ ನ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಸ್ವಾಗತಿಸಿದರು . ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವಂದಿಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ನಾರಾಯಣ,, ಬುದ್ಧ ನಾಯ್ಕ್, ಸುಧಾಕರ್, ರಿಯಾಜ್ ಕಟ್ಟೆಕಾರ್, ಶ್ರೀಮತಿ ಶೀಲಾವತಿ ಕುರುಂಜಿ, ಶಶಿಕಲಾ ನೀರ ಬಿದಿರೆ, ಪ್ರವಿತ ಪ್ರಶಾಂತ್ , ಶಿಲ್ಪಾ ಸುದೇವ್, ಸ್ಥಳೀಯರಾದ ಆನಂದ ಬೆಟ್ಟಂಪಾಡಿ, ಚಂದ್ರಬೆಟ್ಟಂಪಾಡಿ, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿ ಮತ್ತು ಊರವರು ಉಪಸ್ಥಿತರಿದ್ದರು