ಕೊಡಗು ಸಂಪಾಜೆ ಚಿನ್ನಾಭರಣ ಕಳವು ಮನೆಗೆ ಶಾಸಕ ಎ. ಎಸ್ ಪೊನ್ನಣ್ಣ ಭೇಟಿ

0

ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ

ಕೊಡಗು ಸಂಪಾಜೆ ಗ್ರಾಮದ ಬೈಲಿನಲ್ಲಿ ಕಳ್ಳತನ ಚಿನ್ನಾಭರಣ ಹಾಗೂ ನಗದು ಕಳವು ಸಂಭವಿಸಿದ ವಿಜಯಕುಮಾರ್ ಕನ್ಯಾನ ಮನೆಗೆ ಮುಖ್ಯಮಂತ್ರಿಗಳ ಕಾನೂನೂ ಸಲಹೆಗಾರ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ. ಎಸ್ ಪೊನ್ನಣ್ಣ ಫೆ.9ರಂದು ಸಂಜೆ ಭೇಟಿ ನೀಡಿ ಮನೆಯವರೊಂದಿಗೆ ಮಾತುಕತೆ ನಡೆಸಿ, ಆರೋಪಿಗಳನ್ನು ಶೀಘ್ರವೆ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂಧರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಧರ್ಮಜ ಉತ್ತಪ್ಪ, ವಲಯ ಅಧ್ಯಕ್ಷ ಪಿ. ಎಲ್ ಸುರೇಶ್, ಎಸ್. ಪಿ ಹನೀಫ್, ರಿತಿನ್ ಡೆಮ್ಮಾಲೆ, ಸೋಶಿಯಲ್ ಮೀಡಿಯಾ ಪ್ರಮುಖರಾದ ಸೂರಜ್ ಹೊಸೂರು , ಸಂತೋಷ್ ಕುಮಾರ್ ಚಡವು, ಕಾಂಗ್ರೆಸ್ ಪಕ್ಷದ ಮುಖಂಡರು, ಪೊಲೀಸ್ ಸಿಬ್ಬಂದಿಗಳು ಮತ್ತು ಊರಿನವರು ಜೊತೆಗಿದ್ದರು.