ಇನ್ನು ಮುಂದೆ ಈ ದೈವಸ್ಥಾನಕ್ಕೆ ಸಂಬಂಧಪಟ್ಟ ಸೀಮೆಯ ಗ್ರಾಮಗಳಲ್ಲಿ ಯಾವುದೇ ಶುಭಕಾರ್ಯ ನಡೆಸುವಂತಿಲ್ಲ
ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನ ಕಂದ್ರಪ್ಪಾಡಿ ಇಲ್ಲಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಕಂಚು ಕಲ್ಲಿಗೆ ಕಲ್ಲು ಒಡೆಯುವುದರ ಮೂಲಕ ಮೂಹೂರ್ತ ನಡೆಸಲಾಯಿತು.
ಮುಂಜಾನೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ನಡೆಸಿದ ಬಳಿಕ ಕಂಚು ಕಲ್ಲಿಗೆ ಕಾಯಿ ಒಡೆಯುವ ಸಂಪ್ರದಾಯ ನಡೆಸಲಾಯಿತು.
ಸಂಪ್ರದಾಯದಂತೆ ಜಾತ್ರಾ ಮೂಹೂರ್ತ ನಡೆದ
ಫೆ.10ರಿಂದ (ಇಂದಿನಿಂದ) ಮಾ. 15ರ ಧ್ವಜಾವರೋಹಣದ ತನಕ ಶೀ ದೈವಗಳ ಸೀಮೆಗೆ ಒಳಪಟ್ಟ ಗ್ರಾಮಗಳಲ್ಲಿ ಪೂರ್ವ ಪದ್ದತಿಯ ಪ್ರಕಾರ ಮದುವೆ ಹಾಗೂ ಇನ್ನಿತರ ಯಾವುದೇ ಶುಭ ಕಾರ್ಯಗಳನ್ನು ನಡೆಸುವಂತಿಲ್ಲ. ಇದು ಈಗಲೂ ನಡೆದುಕೊಂಡು ಬರುತ್ತಿದೆ.
ಈ ಸಂದರ್ಭದಲ್ಲಿ ಮೊಕ್ತೇಸರ ಕಾಳಿಕಾಪ್ರಸಾದ್ ಮುಂಡೋಡಿ ಸೇರಿದಂತೆ ಸದಸ್ಯರು, ಊರವರು ಉಪಸ್ಥಿತರಿದ್ದರು.