ಜ.21 ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಮಾರಂಭ
ಇತಿಹಾಸ ಪ್ರಸಿದ್ಧ ಅಜ್ಞಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ ಜನವರಿ 17 ರಿಂದ 21ರ ತನಕ ನಡೆಯಲಿದೆ. ಜಾತಿ-ಮತ ಭೇದವಿಲ್ಲದೆ ಸರ್ವ ಧರ್ಮೀಯರು ಗೌರವಿಸಲ್ಪಡುವ ಹಲವಾರು ರೋಗಗಳಿಗೆ ಪರಿಹಾರವನ್ನು ಬಯಸಿ ಬಂದ ಭಕ್ತಾದಿಗಳಿಗೆ ಪರಿಹಾರವನ್ನು ನೀಡುವ ಅಲ್ಲಾಹುವಿನ ಸಾಮಿಪ್ಯ ಪುಣ್ಯಸ್ಥಳವಾದ ಅಜ್ಞಾವರ – ಮೇನಾಲ ದರ್ಗಾ ಶರೀಫ್ ನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಉರೂಸ್ ಕಾರ್ಯಕ್ರಮವು ಜ.17ರಂದು ಅಜ್ಜಾವರ ಮಸೀದಿ ವಠಾರದಲ್ಲಿ ಉದ್ಘಾಟನೆ ಸಮಾರಂಭ ನಡೆಯಿತು. ಇದೇ ಉರೂಸ್ ಕಾರ್ಯಕ್ರಮ ಜನವರಿ 21 ರಂದು ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ಸಮಾಪನಗೊಳ್ಳಲಿದೆ.
ಜ. 17 ರಂದು ಶುಕ್ರವಾರ ಅಜ್ಞಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಸಯ್ಯದ್ ಅಹ್ಮದ್ ಪೂಕೋಯ ತಂಗಳ್ ಪುತ್ತೂರು ದುಆ ನೇತೃತ್ವ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ಮತಪ್ರವಚನ ಅಜ್ಜಾವರ ಜುಮ್ಮಾ ಖತೀಬರಾದ ಹಸೈನಾರ್ ಪೈಝಿ ನೀಡಿದರು.
ಜನವರಿ 18 ರಂದು ಅಜ್ಞಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆದ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಭಾಷಣಗಾರ ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಮಾಯತ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಎ.ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ, ಕೋಶಾಧಿಕಾರಿ ಶರೀಫ್ ರಿಲಾಕ್ಷ್,ಪ್ರಧಾನ ಕಾರ್ಯದರ್ಶಿ ಅಬೂಭಕ್ಕರ್, ಕಾರ್ಯದರ್ಶಿ ಖಾದರ್ ಎನ್,ಮುಹ್ಯದ್ದೀನ್ ಅನ್ಸಾರಿ, ಅಬ್ಬಾಸ್ ಅನ್ಸಾರಿ, ಅಬೂಭಕ್ಕರ್ ಅಝ್ಹರಿ,ಮುಸ್ತಫಾ ಮುಸ್ಲಿಯಾರ್ ಮೇನಾಲ ಉಪಸ್ಥಿತರಿದ್ದರು.
ಜ.19 ರಂದು ಮೇನಾಲ ದರ್ಗಾ ಶರೀಫ್ ನಲ್ಲಿ ಮಗ್ರಿಬ್ ನಮಾಜು ಬಳಿಕ ಮಖಾಂ ಅಲಂಕಾರ ಮತ್ತು ಡಿಕ್ರ್ ಹಲ್ಕ ನಡೆಯಲಿದೆ. ಕಾರ್ಯಕ್ರಮವು ಸಯ್ಯದ್ ಹಕೀಂ ತಂಜಳ್ ಅದೂರು ರವರ ನೇತೃತ್ವದಲ್ಲಿ ನಡೆಯಿತು. ಪ್ರಖ್ಯಾತ ವಾಗ್ಮಿ ಖಲೀಲ್ ಹುದವಿ ಅಲ್ ಮಾಲಿಕಿ ಕಾಸರಗೋಡ್ ಉಪನ್ಯಾಸ ನೀಡಿದರು. ಜ. 20 ರಂದು ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿರುವ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಮಾಲಿಕ್ ದಿನಾರ್ ಜುಮ್ಮಾ ಮಸೀದಿಯ ಖತೀಬರಾದ ಅಲ್ ಹಾಜ್ ಅಬ್ದುಲ್ ಮಜೀದ್ ಬಾಖವಿ ಯವರು ದಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಸಮಾರೋಪ ಸಮಾರಂಭ ಮತ್ತು ಸೌಹಾರ್ದ ಸಮಾರಂಭ
ಜ.21 ರಂದು ಸಂಜೆ ಅಜ್ಜಾವರ ಮೇನಾಲ ಉರೂಸ್ ಸಮಾರಂಭದಲ್ಲಿ ಪ್ರತಿವರ್ಷವೂ ವಿಶೇಷವಾಗಿ ನಡೆಸಿಕೊಂಡು ಬರುತ್ತಿರುವ ಸೌಹಾರ್ದ ಸಂಗಮ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಊರಿನ ಸರ್ವಧರ್ಮೀಯರು ಭಾಗವಹಿಸಲಿದ್ದಾರೆ. ಅಜ್ಜಾವರ ಮಸೀದಿ ಖತೀಬರಾದ ಹಸೈನಾರ್ ಫೈಝಿ ಕೊಡಗು ಅವರ ದುವಾಶಿರ್ವಚನ ಮಾಡಲಿದ್ದಾರೆ. ಸೌಹಾರ್ದ ಸಮಾರಂಭದಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮೊಕ್ತೆಸರರಾದ ಎಂ. ಗುಡ್ಡಪ್ಪ ರೈ ವಹಿಸಲಿದ್ದಾರೆ.
ಧಾರ್ಮಿಕ ವಿದ್ವಾಂಸರಾದ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಜೊಕ್ಕಬೆಟ್ಟು,ಜಿಲ್ಲಾ ಧಾರ್ಮಿಕ ಪರಿಷತ್ತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ದ.ಕ ಜಿಲ್ಲಾ ಗೌಡ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ನಿವೃತ್ತ ಪ್ರಾಂಶುಪಾಲರಾದ ಫ್ರೋ|ಡಿ ಜವರೇ ಗೌಡ, ಹಾಗೂ ಸರ್ವ ಧರ್ಮೀಯರು ಭಾಗವಹಿಸಲಿದ್ದಾರೆ.
ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಎ ವಹಿಸಲಿದ್ದಾರೆ ಕಾರ್ಯಕ್ರಮದ ಉದ್ಘಾಟನೆಯನ್ನುದ.ಕ.ಜಿಲ್ಲಾ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಇದರ ಅಧ್ಯಕ್ಷರಾದ ಬಹು ಶೈಖುನಾ ಅಲ್ಟಾಜ್ ಎನ್.ಪಿ.ಎಂ ಝನುಲ್ ಅಬಿದೀನ್ ತಂಜಳ್ ಕುನ್ನುಂಗೈ ಕೇರಳ ನೆರವೇರಿಸಲಿದ್ದಾರೆ ಅಂತಾರಾಷ್ಟ್ರೀಯ ಪ್ರಭಾಷಣಗಾರ ಬಹು: ಶಫೀಕ್ ಬದ್ರಿ ಅಲ್ ಬಾಖವಿ ಕಡೈಕಲ್ ಕೇರಳ ಉಪನ್ಯಾಸ ನೀಡಲಿದ್ದಾರೆ.
ಸಮಾರೋಪ ಸಮಾರಂಭ ರಾತ್ರಿ ಕೂಟು ಪ್ರಾರ್ಥನೆ, ಮೌಲಿದ್ ಪಾರಾಯಣ ನಡೆಯಲಿದೆ. ಪ್ರತಿದಿನ ರಾತ್ರಿ ಅನ್ನದಾನ ನಡೆಯಲಿದೆ. ಸಮಾರೋಪ ಸಮಾರಂಭದ ಕೊನೆಯಲ್ಲಿ ಅನ್ನದಾನ ವಿತರಣೆ ನಡೆಯಲಿದೆ