ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2023-24ನೇ ಸಾಲಿನ ವೈದ್ಯಕೀಯ ಪದವಿಯ ರ್‍ಯಾಂಕ್ ಪಟ್ಟಿಯನ್ನು ಪ್ರಕಟಿಸಿದ್ದು ಸಂಸ್ಥೆಯ ವಿದ್ಯಾರ್ಥಿಗಳು ಒಟ್ಟು 6 ರ್‍ಯಾಂಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂಶು ಶೆಟ್ಟಿಯವರು ಪ್ರಥಮ ಎಂ.ಬಿ.ಬಿ.ಎಸ್.ನ ಅಂಗರಚನಾ ಶಾಸ್ತ್ರ ವಿಭಾಗದಲ್ಲಿ 7ನೇ ರ್‍ಯಾಂಕ್ ಹಾಗೂ ದ್ವಿತೀಯ ಎಂ.ಬಿ.ಬಿ.ಎಸ್.ನ ನ್ಯಾಯ ವೈದ್ಯ ಶಾಸ್ತ್ರ ವಿಭಾಗದಲ್ಲಿ 1ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ. ಗ್ರೀಷ್ಮಾ ಉಣ್ಣಿಕೃಷ್ಣನ್ ತೃತೀಯ ವೈದ್ಯಕೀಯ ಪದವಿಯಲ್ಲಿ 7ನೇ ರ್‍ಯಾಂಕ್ ಗೆ ಅರ್ಹರಾಗಿರುತ್ತಾರೆ ಅಲ್ಲದೇ ತೃತೀಯ ವರ್ಷದ ಕಿವಿ, ಮೂಗು ಮತ್ತು ಗಂಟಲು ವಿಭಾಗದಲ್ಲಿ 9ನೇ ರ್‍ಯಾಂಕ್ ಹಾಗೂ ಅಂತಿಮ ವರ್ಷದ ಸ್ತ್ರೀರೋಗ ಮತ್ತು ಪ್ರಸೂತಿ ತಂತ್ರ ವಿಭಾಗದಲಿ 10ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ.
ನಿತ್ಯಬಾಲ ಈಶ್ವರ್ ಪ್ರಸಾದ್ ತೃತೀಯ ವೈದ್ಯಕೀಯ ಪದವಿಯಲ್ಲಿ 8ನೇ ರ್‍ಯಾಂಕ್ ಅರ್ಹರಾಗಿರುತ್ತಾರೆ ಅಲ್ಲದೇ ತೃತೀಯ ವರ್ಷದ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದಲ್ಲಿ 5ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ. ವಿಸ್ಮಯ ಕೆ. ತೃತೀಯ ವೈದ್ಯಕೀಯ ಪದವಿಯ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದಲ್ಲಿ 9ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ. ಪೂಜ ದರ್ಶಿನಿ ಅಂತಿಮ ವೈದ್ಯಕೀಯ ಪದವಿಯ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ 9ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ. ಗುರುರಾಜ ಕೆ.ಎಂ. ಅಂತಿಮ ವೈದ್ಯಕೀಯ ಪದವಿಯ ಸ್ತ್ರೀರೋಗ ಮತ್ತು ಪ್ರಸೂತಿ ತಂತ್ರ ವಿಭಾಗದಲ್ಲಿ 10ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ.
ಕಾಲೇಜಿನ ಆಡಳಿತಮಂಡಳಿ, ಡೀನ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿರುತ್ತಾರೆ.