ಫೆ.13ರಿಂದ 15; ಆರೆಂಬಿ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ

0


ಎಣ್ಮೂರು ಗ್ರಾಮದ ಆರೆಂಬಿ ತರವಾಡು ಮನೆಯಲ್ಲಿ ಫೆ.13 ರಿಂದ
ಫೆ.15ರ ತನಕ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ
ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ ಜರಗಲಿರುವುದು.
ಫೆ.13 ರಂದು ಸಂಜೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ. 14 ರಂದು
ಬೆಳಿಗ್ಗೆ ಗಂಟೆ 6-00 ರಿಂದ ಮಹಾಗಣಪತಿ ಹೋಮ,ಪಂಚವಿಶಂತಿ, ಕಲಶಪೂಜೆ
ಬಳಿಕ ನಾಗತಂಬಿಲ,
ದಿವಾ ಗಂಟೆ 8-36ರ ನಂತರ ಮೀನ ಲಗ್ನ ಶುಭಮುಹೂರ್ತದಲ್ಲಿ
ಪಿಲಿ ಚಾಮುಂಡಿ ಮತ್ತು ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ
ಪಂಚವಿಶಂತಿ,ಸಾನಿಧ್ಯ ಕಲಾಶಾಭಿಶೇಕ,ತಂಬಿಲ ಸೇವೆ.
ಬೆಳಿಗ್ಗೆ ಗಂಟೆ 10-00ಕ್ಕೆ ವೆಂಕಟರಮಣ ದೇವರ ಹರಿಸೇವೆ,ಮಂಗಳಾರತಿ,ಪ್ರಸಾದ ವಿತರಣೆ,ಅನ್ನ ಸಂತರ್ಪಣೆ.
ರಾತ್ರಿದೈವಗಳ ಭಂಡಾರ ತೆಗೆಯುವುದು,ಬಳಿಕ
ಸತ್ಯದೇವತೆ,ಪಿಲಿ ಚಾಮುಂಡಿ,ಕಲ್ಲುರ್ಟಿ,ಕುಪ್ಪೆ ಪಂಜುರ್ಲಿ ನೇಮ.
ಫೆ.15 ರಂದು
ಬೆಳಿಗ್ಗೆ ಗಂಟೆ 7-00ರಿಂದ ಧರ್ಮದೈವ ರುದ್ರ ಚಾಮುಂಡಿ,ವರ್ಣಾರ ಪಂಜುರ್ಲಿ ಹಾಗೂ ಗುಳಿಗ ದೈವದ ನೇಮ
ಮಧ್ಯಾಹ್ನ ಗಂಟೆ 12-00ರಿಂದ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.