ವಿನೋಬನಗರದ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಗಣಿತದ ವ್ಯವಹಾರವಾಗಿ ಮೆಟ್ರಿಕ್ ಮೇಳವನ್ನು ಫೆ :10ರಂದು ಆಯೋಜಿಸಲಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳು ಅಂಕಿಗಳ ಮಹಾರಾಜ ಯಾರು? ಎಂದು ಕಿರು ಪ್ರಹಸನದೊಂದಿಗೆ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದರು.
ವಿದ್ಯಾರ್ಥಿಗಳು ಮನೆಯಲ್ಲಿ ಬೆಳೆಸಿದ ತರಕಾರಿಗಳನ್ನು ಹಾಗೂ ಮನೆಯಲ್ಲೇ ಮಾಡಿದ ತಿಂಡಿ ತಿನಿಸುಗಳನ್ನು ತಂದು ವ್ಯಾಪಾರ ನಡೆಸಿ ಗಣಿತದಲ್ಲಿನ ವ್ಯವಹಾರ ಜ್ಞಾನವನ್ನು ಪಡೆದರು. ಮೇಳದಲ್ಲಿ 60 ಸ್ಟಾಲ್ ಗಳನ್ನು ಹಾಕಲಾಗಿತ್ತು. ಹೀಗೆ ವಿದ್ಯಾರ್ಥಿಗಳಲ್ಲಿ ಬಂಡವಾಳ (ಅಸಲು), ಲಾಭ, ನಷ್ಟ, ಪರಿಕಲ್ಪನೆಯನ್ನು ಮೂಡಿಸಲಾಯಿತು.