ಪಂಜ : ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

0

ಜೇಸಿಐ ಪಂಜ ಪಂಚಶ್ರೀ, ಪಶುಸಂಗೋಪನೆ ಇಲಾಖೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ 22 ನೇ ವರುಷದ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಫೆ.11ರಂದು ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಜೇಸಿಐ ಪೂರ್ವ ವಲಯ ಉಪಾಧ್ಯಕ್ಷ ಅಜಿತ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ”ಪಂಜ ಪಂಚಶ್ರೀ ಜೇಸಿಐ ಯವರ ಹುಚ್ಚು ನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಇದು ಉತ್ತಮ ಮಾದರಿ
ಕಾರ್ಯಕ್ರಮ.”ಎಂದು ಹೇಳಿದರು.

ಜೇಸಿಐ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು.

ಅತಿಥಿ ಸುಳ್ಯ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ ನಿತಿನ್ ಪ್ರಭು ಮಾತನಾಡಿ
“ಕಳೆದ 22 ವರುಷಗಳಿಂದ
ನಿರಂತರವಾಗಿ ಹುಚ್ಚು ನಾಯಿ ನಿರೋಧಕ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಅನುದಾನದ ಸಹಕಾರ ಅಗತ್ಯವಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಕಚ್ಚಿದರೆ ರೂ.5000, ನಾಯಿ ಕಚ್ಚಿ ಮೃತ ಪಟ್ಟರೆ ರೂ.5 ಲಕ್ಷ ಪರಿಹಾರವನ್ನು ಸ್ಥಳೀಯಾಡಳಿತ ನೀಡಲು ಸರ್ಕಾರದ ಆದೇಶ ಇದೆ. ಆದ್ದರಿಂದ ಲಸಿಕಾ ಕಾರ್ಯಕ್ರಮದ ಬಗ್ಗೆ ಕಾಳಜಿ ವಹಿಸ ಬೇಕು. ಸಂಘಟನೆಗಳೊಂದಿಗೆ ಕೈ ಜೋಡಿಸಿ ರೇಬಿಸ್ ಮುಕ್ತ ರಾಷ್ಟ್ರವಾಗಲು
ಸಹಕರಿಸ ಬೇಕು ” ಎಂದು ಅವರು ವಿವರಿಸಿದರು.

ಅತಿಥಿಯಾಗಿ ಕಡಬ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಜೀತ್ ಎಂ ಸಿ , ಕಾರ್ಯದರ್ಶಿ ಜೀವನ್ ಶೆಟ್ಟಿಗೆದ್ದೆ, ಕಾರ್ಯಕ್ರಮ ನಿರ್ದೇಶಕ ಪ್ರವೀಣ್ ಕಾಯರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದುರ್ಗಾದಾಸ್ ಕಡ್ಲಾರ್ ವೇದಿಕೆಗೆ ಆಹ್ವಾನಿಸಿದರು.ಕಾರ್ತಿಕ್ ಐ ವಿ ಜೇಸಿ ವಾಣಿ ನುಡಿದರು.
ಜೀವನ್ ಮಲ್ಕಜೆ ಸ್ವಾಗತಿಸಿದರು. ಅಶ್ವತ್ ಬಾಬ್ಲುಬೆಟ್ಟು ಅತಿಥಿಗಳನ್ನು ಪರಿಚಯಿಸಿದರು.
ಜೀವನ್ ಶೆಟ್ಟಿಗೆದ್ದೆ ವಂದಿಸಿದರು.

ಘಟಕದ ಪದಾಧಿಕಾರಿಗಳು, ಸದಸ್ಯರು, ವೈದ್ಯರು ನಿಗದಿಪಡಿಸಿದ ಪಂಜ, ಕಲ್ಮಡ್ಕ, ಬಳ್ಪ, ಎಡಮಂಗಲ, ಮುರುಳ್ಯ, ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಸಾಕು ನಾಯಿಗಳಿಗೆ ಲಸಿಕೆ ನೀಡಿದರು.