ತುಳುನಾಡಿನಲ್ಲಿ ಆಚರಿಸುವ ವಿಶಿಷ್ಟ ಕೆಡ್ಡಸ ಹಬ್ಬ.ತುಳುನಾಡು ಅಂದ ತಕ್ಷಣ ಅಲ್ಲಿನ ಆಚರಣೆ,ಸಂಸ್ಕೃತಿ ವಿಶಿಷ್ಟವಾದದ್ದು, ಹೆಣ್ಣಿಗೆ ವಿಶೇಷ ಗೌರವವಿದೆ. ತುಳು ತಿಂಗಳಿನ ಪೊನ್ನಿಯಲ್ಲಿ ಇದ್ದು ಕೆಡ್ಡಸ, ನಡು ಕೆಡ್ಡಸ, ಕಡೆ ಕೆಡ್ಡಸ ವೆಂದು ಮೂರು ದಿನ ಆಚರಿಸಲಾಗುತ್ತದೆ. ಜನಪದ,ಸಂಸ್ಕ್ರತಿ ಹಿನ್ನಲೆಯಲ್ಲಿ ಪ್ರಕೃತಿ ಸಹಜವಾಗಿ ಭೂಮಿ ತಾಯಿ ಋತುಮತಿಯಾಗುತ್ತಾಲೆ ಹಾಗಾಗಿ ಅವರನ್ನು ಮಡಿಗೊಳಿಸುವ ದಿನವೆಂದು ಕೆಡ್ಡಸ ತುಳುನಾಡಿನಲ್ಲಿ ಆಚರಣೆ ನಡೆಸಲಾಗುತ್ತದೆ. ಎರಡನೇ ದಿನ ಭೂ ತಾಯಿಗೆ ಅಂಗಳಕ್ಕೆ ಸೆಗಣಿ ಸಾರಿಸಿ,ಭೂಮಿಗೆ ಎಣ್ಣೆ ಬಿಟ್ಟು,ಶೀಗೆ, ಹಲಸಿನ ಎಲೆ,ಹಲ್ಲುಜ್ಜುವ ಇದ್ದಿಲು, ನನ್ಯರಿ ,ಬಾಳೆ ಹಣ್ಣು ಗಳನ್ನು ಬಾಳೆಯಲ್ಲಿಟ್ಟು ಭೂ ತಾಯಿಗೆ ಮನೆಯ ತಾಯಂದಿರು ಸಮರ್ಪಣೆ ಮಾಡುತ್ತಾರೆ.ಪ್ರತಿ ಮನೆಯಲ್ಲಿ ಅದೇ ನನ್ಯರಿ ಬೆಳಗ್ಗಿನ ಉಪಹಾರಕ್ಕೆ ಖಾಯಂ. ಹಿಂದಿನ ಕಾಲದಲ್ಲಿ ಕೆಲವು ಸಮಾಜದವರು ಪಾಡ್ದನ ಮೂಲಕ ಮನೆ ಮನೆಗೆ ವಿಚಾರ ತಲುಪಿಸುತ್ತಿದ್ದರು.ಕೆಡ್ಡಸ ದಿನದಂದು ಭೂಮಿ ತಾಯಿಗೆ ನೋವು ಮಾಡಬಾರದು ಕತ್ತಿ, ಗಾರೆ ಕೆಲಸ ಆ ದಿನದಂದು ನಿಷಿದ್ಧ .ಪ್ರತಿ ಆಚರಣೆಗಳಲ್ಲಿ ಪ್ರಕೃತಿಯ ಆರಾಧನೆಯನ್ನು ನಾವು ಈ ಮೂಲಕ ಕಾಣಬಹುದು.ಈ ನೆಲದ ಮಣ್ಣು ಮತ್ತು ತಾಯಿಯನ್ನು ದೇವರ ರೂಪದಲ್ಲಿ ತುಳುನಾಡಿನ ಜನ ಗೌರವಿಸುತ್ತಾರೆ ಅನ್ನೋದಕ್ಕೆ ಕೆಡ್ಡಸ ಆಚರಣೆ ಒಂದು ನಿದರ್ಶನ.ಮಹಿಳೆಯರಲ್ಲಿ ಪ್ರಕೃತಿ ಸಹಜವಾಗಿ ಬದಲಾಗುವ ಆ ಸಂದರ್ಭದಲ್ಲಿ ಆಕೆಯನ್ನು ಬರಮಾಡಿಕೊಳ್ಳುವುದು,ಸಂಭ್ರಮಿಸುವುದು ಬೇರೆ ಯಾವ ಸಂಸ್ಕ್ರತಿ ಯಲ್ಲಿ ಕಾಣಸಿಗಲು ಸಾಧ್ಯವಿಲ್ಲ. ಈ ಆಚರಣೆಯಲ್ಲಿ ವೈಜ್ಞಾನಿಕ ಕಾರಣವಿದೆ ಆ ಸಂದರ್ಭದಲ್ಲಿನ ನನ್ಯರಿ ಆರೋಗ್ಯ ವನ್ನು ಕಾಪಾಡುತ್ತದೆ. ಕೆಡ್ಡಸ ಅದೊಂದು ಕೇವಲ ಆಚರಣೆಯಲ್ಲ ಅಲ್ಲೊಂದು ಸತ್ವವಿದೆ,ಮೂಲ ನಂಬಿಕೆ ಜೊತೆಗೆ ವೈಜ್ಞಾನಿಕ ಸಾಮೀಪ್ಯವಿದೆ. ಮುಂದಿನ ದಿನಗಳಲ್ಲಿ ಹೊಸ ಪೀಳಿಗೆಗೆ ಜನರಿಗೆ ತಲುಪಿಸುವ ಕಾರ್ಯವಾಗಬೇಕು.ಆಚರಣೆಗಳ ಮಹತ್ವ,ಅದರ ಉದ್ದೇಶ ಸಮಾಜಕ್ಕೆ ಅರಿವು ಮೂಡಿಸಬೇಕಾದ ಅಗತ್ಯವಿದೆ.
ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿ