ಅರಂತೋಡು: ಕಾರು – ಬೈಕ್ ಅಪಘಾತ ಬೈಕ್ ಸವಾರರಿಗೆ ಗಾಯ

0

ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರರು ಗಾಯಗೊಂಡ ಘಟನೆ ಅರಂತೋಡಿನಲ್ಲಿ ಫೆ.12ರಂದು ಬೆಳಿಗ್ಗೆ ಸಂಭವಿಸಿದೆ.

ಅರಂತೋಡಿನಿಂದ ಸುಳ್ಳಕ್ಕೆ ತೆರಳುತ್ತಿದ್ದ ಸುಳ್ಯ ಮಾಂಡವಿ ಶೋ ರೂಮ್ ನ ಉದ್ಯೋಗಿ ಯುವಕರು ಸುಳ್ಯ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಹಿಂಭಾಗಕ್ಕೆ ಬೈಕ್ ಢಿಕ್ಕಿ ಹೊಡೆದಿದ್ದು, ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದು, ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.