ಸುಳ್ಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ಸಾನಿಧ್ಯ ದೈವದ ನೂತನ ಕಚೇರಿ ಕಟ್ಟಡ ಉದ್ಘಾಟನೆ

0

ಸುಳ್ಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ಸಾನಿಧ್ಯ ದ ನೂತನ ಕಚೇರಿ ಉದ್ಘಾಟನೆಯು ಫೆ.13 ರಂದು ಬೆಳಿಗ್ಗೆ ನಡೆಯಿತು.

ಬೆಳಿಗ್ಗೆ ಗಣಹೋಮ,ಸಂಕ್ರಮಣ ಪೂಜೆ,ತಂಬಿಲ ಸೇವೆ ಹಾಗೂ ನೂತನ ಕಚೇರಿ ಉದ್ಘಾಟನೆ ನಡೆಯಿತು.

ಕಚೇರಿಯನ್ನು ಶ್ರೀಮತಿ ಭವಾನಿ ಸಂಕಪ್ಪ ಗೌಡ ಮತ್ತು ಸಂಕಪ್ಪ ಗೌಡ ನೀರ್ಪಾಡಿ ಗೌರವಾಧ್ಯಕ್ಷರು ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ಇವರು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ನ ಅಧ್ಯಕ್ಷ ರಘುನಾಥ ಶೆಟ್ಟಿ,ಉಪಾಧ್ಯಕ್ಷ ನೋಣಪ್ಪ ಗೌಡ ಕಲ್ಕುದಿ,ಕಾರ್ಯದರ್ಶಿ ಮುರಳಿ ಮಾವಂಜಿ,ಜತೆ ಕಾರ್ಯದರ್ಶಿ ಲವಕುಮಾರ್ ಕನ್ನಡ್ಕ,ಕೋಶಾಧಿಕಾರಿ ಮಹಾಲಿಂಗನ್ ಬಾಜರ್ ತ್ತೊಟ್ಟಿ,ನಿರ್ದೇಶಕರಾದ ದಿನೇಶ್ ಕುಮಾರ್ ಕೆ.ಸಿ,ಸನತ್ ರಾಮಚಂದ್ರ,ರಾಮಚಂದ್ರ ಭಟ್ ಹಾಗೂ ಗೌರವ ಸಲಹೆಗಾರರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.


ಫೆ.17 ರಂದು ನೇಮೋತ್ಸವ
ಫೆ.17 ರಂದು ಬೆಳಿಗ್ಗೆ ಗಂಟೆ 6.00 ಕ್ಕೆ ಗಣಹೋಮ,ಸಂಜೆ ಗಂಟೆ 6.30 ಕ್ಕೆ ಭಂಡಾರ ತೆಗೆಯುವುದು.ಸಂಜೆ ಗಂಟೆ 7.00 ಕ್ಕೆ ಶ್ರೀ ದೈವಕ್ಕೆ ಎಣ್ಣೆ ವೀಳ್ಯ ನೀಡುವುದು ನಂತರ ಶ್ರೀ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 9.30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು.