ಪಂಜ: ಜಾನುವಾರುಗಳ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮ

ಉಚಿತ ಜಾಷಧಿ ವಿತರಣೆ; ಮಾಹಿತಿ ಕಾರ್ಯಾಗಾರ

0

ಜಂತು ಹುಳು ಜಾಷಧಿಯಿಂದ ರೋಗ ನಿರೋಧಕ ಶಕ್ತಿ ,ಹಾಲಿನ ಗುಣಮಟ್ಟ ,ಇಳುವರಿ ಜಾಸ್ತಿ-ಡಾ.ಚರಣ್

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಕುಲಶೇಖರ ಮಂಗಳೂರು, ಪಂಜ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಜಂಟಿ ಆಶ್ರಯದಲ್ಲಿ ಜಾನುವಾರುಗಳ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮ ಮತ್ತು ಮಾಹಿತಿ ಶಿಬಿರ ಸಂಘದಲ್ಲಿ ಫೆ.17. ರಂದು ಜರುಗಿತು. ಕಾರ್ಯಕ್ರಮದಲ್ಲಿ ‌ಪಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ನಾಯಕ್ ಬೇರ್ಯ ಸಭಾಧ್ಯಕ್ಷತೆ ವಹಿಸಿದ್ದರು.

ಸುಳ್ಯ ಶಿಬಿರ ಕಚೇರಿ ಪಶು ವೈದ್ಯಾಧಿಕಾರಿ ಡಾ.ಚರಣ್ ಮಾಹಿತಿ ನೀಡಿ “ಸಮಯಕ್ಕೆ ಸರಿಯಾಗಿ ಜಂತು ಹುಳು ಜಾಷಧಿ ಜಾನುವಾರಗಳಿಗೆ ನೀಡಿ.
ಜಂತು ಹುಳು ನಿವಾರಣೆಯಿಂದ ಜಾನುವಾರುಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ, ಪರೋಪಜೀವಿಗಳ ಬಾಧೆಯಿಂದಾಗಿ ರೋಗಗಳಿಗೆ ತುತ್ತಾಗುವುದಿಲ್ಲ, ರಕ್ತ ಹೀನತೆಯಿಂದ ಬಳಲುವುದಿಲ್ಲ, ಸಕಾಲದಲ್ಲಿ ಗರ್ಭಧಾರಣೆಗೆ ಸಹಾಯವಾಗುತ್ತದೆ. ರಾಸುಗಳ ಆರೋಗ್ಯ ವೃದ್ಧಿಯಾದಾಗ ಹಾಲಿನ ಗುಣಮಟ್ಟ ಮತ್ತು ಇಳುವರಿ ಜಾಸ್ತಿಯಾಗುತ್ತದೆ”. ಎಂದು ವಿವರಿಸಿದರು
.

ಸುಳ್ಯ ಕ್ಷೇತ್ರ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಯಂ ಯಸ್, ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಶಾಸ್ತ್ರಿ ಸಿ, ಸಂಘದ ಉಪಾಧ್ಯಕ್ಷ ಮೋನಪ್ಪ ಕೆಬ್ಲಾಡಿ, ನಿರ್ದೇಶಕರಾದ ಚನಿಯಪ್ಪ ಕುಳ್ಳಕೋಡಿ, ನಾರಾಯಣ ನಾಯ್ಕ ಚಾಳೆಗುಳಿ, ಗಣೇಶ್ ಪಾಲೋಳಿ, ಉದಯ ಬಿಡಾರಕಟ್ಟೆ,ಪೆರ್ಗಡೆ ಕಾಣಿಕೆ, ಜಯಂತ ಕುಳ್ಳಕೋಡಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು,ಕೃ.ಗ.ಕಾರ್ಯಕರ್ತ ಕೇಶವ ಕೆ, ಸಂಘದ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ವೇಳೆ ಉಚಿತವಾಗಿ ಜಂತು ಹುಳು ಜಾಷಧಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹರೀಶ್ ಯಂ ಯಸ್ ಸ್ವಾಗತಿಸಿದರು. ಆದರ್ಶ ಚಿದ್ಗಲ್ಲು ವಂದಿಸಿದರು.