ಭಕ್ತಿ,ಸಂಭ್ರಮದಿಂದ ನಡೆದ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ

0

ಇಂದು ರಾತ್ರಿ ಅಗ್ನಿಗುಳಿಗ ದೈವದ ಭಂಡಾರ ತೆಗೆಯುವುದು ಭೂತಕೋಲ,ಬಟ್ಟಲು ಕಾಣಿಕೆ

ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಫೆ.13 ರಿಂದ ಪ್ರಾರಂಭಗೊಂಡು ಫೆ.17 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಫೆ.17 ರಂದು ಬೆಳಿಗ್ಗೆ ಕವಾಟೋದ್ಘಾಟನೆ,ತೈಲಾಭ್ಯಂಜನ ನಡೆಯಿತು. ನಂತರ ಉಷಾಪೂಜೆ,ಆರಾಟು ಬಲಿ, ಅವಭೃತ ಸ್ನಾನ ,ದರ್ಶನ ಬಲಿ ನಡೆಯಿತು.

ರಾಜಾಂಗಣ ಪ್ರಸಾದ,ಬಟ್ಟಲುಕಾಣಿಕೆ,ಧ್ವಜ ಅವರೋಹಣ,ಸಂಪ್ರೋಕ್ಷಣೆ,ಮಹಾಪೂಜೆ,ಮಂತ್ರಾಕ್ಷತೆ ನಡೆದ ಬಳಿಕ ಸಾವಿರಾರು ಜನರು ಅನ್ನಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸದಸ್ಯರಾದ ಅರ್ಚಕ ಉದಯಕುಮಾರ ಕೆ.ಟಿ, ವಿಶ್ವನಾಥ ಭಟ್ ಕುರುಂಬುಡೇಲು,ಗಂಗಾಧರ ರೈ ಪುಡ್ಕಜೆ,ಉದಯಪ್ರಸಾದ್ ಅಜಪಿಲ, ಶಮಿತಾ ಪಿ.ರೈ ಪನ್ನೆ, ನವಪ್ರಭಾ ತಂಬಿನಮಕ್ಕಿ, ರಾಧಾಕೃಷ್ಣ ಕುಲಾಲ್, ಚಂದ್ರಕಾಂತ ಗೌರಿಹೊಳೆ ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ರಾತ್ರಿ 7.30ಕ್ಕೆ ಅಗ್ನಿಗುಳಿಗ ದೈವದ ಭಂಡಾರ ತೆಗೆಯುವುದು.ಭೂತಕೋಲ,ಬಟ್ಟಲುಕಾಣಿಕೆ ನಡೆಯಲಿದೆ